ಕೊಳ್ಳೇಗಾಲ ಸಿಂಗಾನಲ್ಲೂರು ಗ್ರಾಮದ ಹೊರ ವಲಯದ ಬಸ್ ನಿಲ್ದಾಣದ ಬಳಿ ಕೆಶಿಫ್ ನಿರ್ಮಿಸಿರುವ ರಸ್ತೆಯು ಕುಸಿದಿರುವುದು.
ಕೊಳ್ಳೇಗಾಲ: ತಾಲೂಕಿನ ಸಿಂಗಾನಲ್ಲೂರು ಗ್ರಾಮದ ಹೊರ ವಲಯದ ಬಸ್ ನಿಲ್ದಾಣದ ಬಳಿ ಕೆಶಿಫ್ ನಿರ್ಮಿಸಿರುವ ರಸ್ತೆಯು ಕುಸಿದಿದ್ದು, ಸವಾರರು ಆತಂಕದಲ್ಲಿ ಸಂಚರಿಸಬೇಕಿದೆ.
ತಾಲೂಕಿನ ನರೀಪುರ ಗ್ರಾಮದ ಹೊರವಲಯದಿಂದ ಕೆಶಿಫ್ ಹನೂರಿನ ವರೆಗೂ ರಸ್ತೆ ನಿರ್ಮಿಸಿದೆ. ಸಿಂಗಾನಲ್ಲೂರು ಗ್ರಾಮದ ಹೊರ ವಲಯದ ಬಸ್ ನಿಲ್ದಾಣದ ಬಳಿ ರಸ್ತೆಯು ಮಧ್ಯ ಭಾಗದಲ್ಲೇ ಕುಸಿದಿದೆ. ಇದರಿಂದಾಗಿ ಬೈಕ್ ಸವಾರರು ಕುಸಿದಿರುವ ರಸ್ತೆಯ ತಪ್ಪಿಸಲು ಮುಂದಾದಾಗ, ರಾತ್ರಿ ಸಂಚಾರದ ವೇಳೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟವರು ತಕ್ಷಣವೇ ಹಳ್ಳವಾಗಿರುವ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.