ಕೊಳ್ಳೇಗಾಲ ಪ್ರವಾಸಿ ಮಂದಿರದಲ್ಲಿ ತಾಲೂಕು ಛಾಯಾ ಚಿತ್ರ ಗ್ರಾಹಕರ ಸಂಘದಿಂದ ಕಾರ್ಮಿಕ ದಿನಾಚರಣೆ ಮಾಡಲಾಯಿತು.ಜಯ ಪ್ರಕಾಶ್, ಸರದಾರ್ ಪಾಷ, ರೋಷನ್ ಕುಮಾರ್ ಇತರರಿದ್ದರು.
ಕೊಳ್ಳೇಗಾಲ: ಪಟ್ಟಣದ ಪ್ರವಾಸಿ ಮಂದಿರ ಮುಂಭಾಗ ಶುಕ್ರವಾರ ತಾಲೂಕು ಛಾಯಾ ಚಿತ್ರ ಗ್ರಾಹಕರ ಸಂಘದಿಂದ ಕಾರ್ಮಿಕ ದಿನಾಚರಣೆ ಮಾಡಲಾಯಿತು.
ಈ ವೇಳೆ ತಾಲೂಕು ಛಾಯಾ ಗ್ರಾಹಕರ ಸಂಘ ಅಧ್ಯಕ್ಷ ಜಯ ಪ್ರಕಾಶ್ ಅವರು ಛಾಯಾಚಿತ್ರ ಗ್ರಾಹಕರಿಗೆ ಕಾರ್ಮಿಕರ ಕಾರ್ಡ್ ವಿತರಣೆ ಮಾಡಿದರು. ಬಳಿಕ ಮಾತನಾಡಿ, ಸರ್ಕಾರ ಛಾಯಾ ಚಿತ್ರಗ್ರಾಹಕರಿಗೆ ಸವಲತ್ತುಗಳನ್ನು ನೀಡುವುದರ ಜತೆಗೆ ಭದ್ರತೆ ಒದಗಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ಉಪಾಧ್ಯಕ್ಷ ಸರದಾರ್ ಪಾಷ, ಕಾರ್ಯದರ್ಶಿ ರೋಷನ್ ಕುಮಾರ್, ಗೌರವಾಧ್ಯಕ್ಷ ಷಣ್ಮುಖಸ್ವಾಮಿ, ನಿರ್ದೇಶಕರಾದ ನವೀನ್ ಕುಮಾರ್, ವಾಸು, ವಸಂತ ಕುಮಾರ್, ಜಿ.ಆರ್.ರಘು, ರಘುನಾಥ್, ರಕ್ಷಿತ್ ಕುಮಾರ್ ಮತ್ತಿತರಿದ್ದರು.