ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿ ಡಾ.ಎಸ್.ಪಿ. ಬಾಲಸುಬ್ರಮಣ್ಯಂ ಗಾನಗಂಧರ್ವ ಹಾಗೂ ಸಾಂಸ್ಕೃತಿಕ ಕಲಾವೇದಿಕೆಯಿಂದ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕೃಷ್ಣನಾಯಕ, ನಾಗವೇಣಿ, ಪಣ್ಯದಹುಂಡಿ ರಾಜು, ಶಿವಶಂಕರ್, ವಸಂತ ಬಂಗಾರು ಇತರರು ಇದ್ದರು.  
ಚಾಮರಾಜನಗರ

ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಲಭಿಸಲಿ

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ಶ್ರೀನಿಧಿ ಅಭಿಪ್ರಾಯ
ಚಾಮರಾಜನಗರ: ತಾಲೂಕಿನ ಕೆಲ್ಲಂಬಳ್ಳಿ- ಬಸವನಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಲಭಿಸಲು ಕ್ರಮ ಕೈಗೊಳ್ಳಬೇಕೆಂದು ಉದ್ಯಮಿ ಶ್ರೀನಿಧಿ ತಿಳಿಸಿದರು.
ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿ ಡಾ.ಎಸ್.ಪಿ. ಬಾಲಸುಬ್ರಮಣ್ಯಂ ಗಾನಗಂಧರ್ವ ಹಾಗೂ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಮಾತನಾಡಿದರು.
ಆಧುನಿಕ ತಂತ್ರಜ್ಞಾನದಿಂದ ಉದ್ಯೋಗ ಕಡಿತವಾಗುತ್ತಿರುವುದು ಆತಂಕದ ವಿಚಾರ ಹೀಗಾಗಿ ಪ್ರತಿಯೊಬ್ಬರು ಸಣ್ಣ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ವಾವಲಂಬಿ ಯಾಗಿ ಇತರರಿಗೂ ಕೆಲಸ ನೀಡುವಂತ ನಿಟ್ಟಿನಲ್ಲಿ ಹೊಸ ಆಲೋಚನೆ ಮಾಡಬೇಕು ಎಂದು ತಿಳಿಸಿದರು.
ದೇಶದಲ್ಲಿ ಆರ್ಥಿಕತೆ ಬಲಿಷ್ಠವಾಗಿರಬೇಕೆಂದರೆ ಅದಕ್ಕೆ ಮೂಲ ಕಾರಣ ಕಾರ್ಮಿಕರು. ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವಂತಹ ಸೌಲಭ್ಯಗಳನ್ನು ಕಲ್ಪಿಸಲು ಸಂಘಟನೆಯ ಮುಖಂಡರು ಶ್ರಮವಿಸಬೇಕೆಂದು ಸಲಹೆ ನೀಡಿದರು. ಹಿಂದೆ ಕಾರ್ಮಿಕರು ಹೆಚ್ಚು ಸಮಯ ದುಡಿಯುವಂತೆ ಮಾಡಲಾಗಿತ್ತು. ಆದರೆ ಈಗ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ಪ್ರತಿಯೊಬ್ಬ ಕಾರ್ಮಿಕರು 8 ಗಂಟೆ ಅವಧಿ ಮಾತ್ರ ದುಡಿಯಲು ಕಾನೂನು ರೂಪಿಸಿದ ಪರಿಣಾಮ ದಿಂದ ನೆಮ್ಮದಿ ಜೀವನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕನ್ನಡ ಚಳುವಳಿ ಹೋರಾಟಗಾರ ಚಾ. ರಂ. ಶ್ರೀನಿವಾಸ ಗೌಡ ಮಾತನಾಡಿ, ಕಾರ್ಮಿಕರ ಬಗ್ಗೆ ಸ್ಥಳೀಯ ಕಾರ್ಮಿಕ ಇಲಾಖೆ ಸಮರ್ಪಕವಾಗಿ ಮಾಹಿತಿ ನೀಡದೆ ಇರುವ ಪರಿಣಾಮ ಸಾಕಷ್ಟು ಕಾರ್ಮಿಕರಿಗೆ ಸರ್ಕಾರದ ಸವಲತ್ತು ದೊರೆಯುತ್ತಿಲ್ಲ. ಹೀಗಾಗಿ ಕಾರ್ಮಿಕರಿಗೆ ಸೌಲಭ್ಯಗಳ ಕುರಿತು ಹೆಚ್ಚು ತಿಳುವಳಿಕೆ ಮೂಡಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕರಾದ ರಾಜಮ್ಮ ಲಕ್ಷ್ಮಣ ಪ್ರಸಾದ್ ಮಹೇಶ್ ಮಧು ಪೈಂಟರ್ ವೆಂಕಟೇಶ್ ಮೇಸ್ತ್ರಿ ಕುಮಾರ್ ಮಣಿ ಇವರಿಗೆ ಗೌರವಿಸಲಾಯಿತು.
ಮುಖಂಡ ಡಿ. ಎಲ್. ಕುಮಾರ್, ಕಲಾಪೋಷಕ ಬಿಜೆಪಿ ಮಹೇಶ್, ಎಸ್.ಪಿ.ಬಿ ಗುಂಬಳ್ಳಿ ಕೃಷ್ಣ, ಸಂಘದ ಅಧ್ಯಕ್ಷ ಶಿವಣ್ಣ ಮಂಗಳೂರು ಉಪಾಧ್ಯಕ್ಷ ವಸಂತ ಬಂಗಾರು, ರೈತ ಹೋರಾಟಗಾರ ಚಿಕ್ಕ ಮೊಳೆ ಸಿದ್ದಶೆಟ್ಟಿ, ಗಾಯಕ ಶಿವಶಂಕರ್, ರಂಗನಾಥ್ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗವೇಣಿ ಇತರರಿದ್ದರು.------