ಚಾಮರಾಜೇಶ್ವರ ದೇವಾಲಯ 
ಚಾಮರಾಜನಗರ

ಚಿನ್ನಾಭರಣಗಳ ಕುರಿತು ಮಾಹಿತಿ ನೀಡಿ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • jewelry
ಚಾಮರಾಜನಗರ: ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಚಿನ್ನಾಭರಣಗಳ ಕುರಿತು ಸಂಬಂಧಪಟ್ಟ ಮುಜರಾಯಿ ಇಲಾಖೆಯವರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಯುವ ರೆಡ್‌ಕ್ರಾಸ್ ಅಧ್ಯಕ್ಷ ಎಲ್.ಸುರೇಶ್ ಆಗ್ರಹಿಸಿದರು.
ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯಕ್ಕೆ ಮೈಸೂರಿನ ಮಹಾರಾಜರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಅನೇಕ ಚಿನ್ನಾಭರಣಗಳನ್ನು ಕೊಡುಗೆ ನೀಡಿದ್ದರು. ಸುಮಾರು 30 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ನಡೆಯುತ್ತಿದ್ದ ರಥೋತ್ಸವ, ಗಿರಿಜಾ ಕಲ್ಯಾಣ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳ ಸಂದರ್ಭದಲ್ಲಿ ದೇವರಿಗೆ ಚಿನ್ನಾಭರಣಗಳನ್ನು ಧರಿಸಲಾಗುತ್ತಿತ್ತು. ಆದರೆ ಈಗ ದೇವರಿಗೆ ಯಾವುದೇ ಆಭರಣಗಳನ್ನು ಧರಿಸುತ್ತಿಲ್ಲ ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಳೆದ ಹಲವಾರು ವರ್ಷಗಳಿಂದಲೂ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಚಿನ್ನಾಭರಣಗಳನ್ನು ನಾವು ನೋಡಿಲ್ಲ. ಈ ಸಂಬಂಧ ಮುಜರಾಯಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಚಿನ್ನಾಭರಣಗಳೆಲ್ಲವೂ ಖಜಾನೆಯಲ್ಲಿ ಇವೆ ಎಂಬ ಉತ್ತರ ನೀಡುತ್ತಾರೆ. ಈ ಸಂಬಂಧ ಹಲವು ಅನುಮಾನಗಳು ಮೂಡುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚಿನ್ನಾಭರಣಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.