ತಮಿಳುನಾಡಿಗೆ ನೀರು ಹರಿಸದೆ ನಮ್ಮ ರಾಜ್ಯದ ರೈತರಿಗೆ ನೀರು ಕೊಡಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ) ಪ್ರದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಕೃಪಾಕಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೊಳ್ಳೇಗಾಲ:
ತಮಿಳುನಾಡಿಗೆ ನೀರು ಹರಿಸದೆ ನಮ್ಮ ರಾಜ್ಯದ ರೈತರಿಗೆ ನೀರು ಕೊಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡರ ಬಣ) ಪ್ರತಿಭಟನೆ ನಡೆಸಿತು.
ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನಾಕಾರರು ಘೋಷಣೆ ಕೂಗುವ ಮೂಲಕ ಕಾಲ್ನಡಿಗೆಯಲ್ಲಿ ತಾಲೂಕು ಕಚೇರಿ ತಲುಪಿದರು. ಬಳಿಕ ಹೋರಾಟಗಾರರು ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ಕೃಪಕಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ನಮ್ಮ ರಾಜ್ಯದಲ್ಲಿ ಕುಡಿಯಲು ನೀರಿಲ್ಲದ ಸಮಯದಲ್ಲಿ ತಮಿಳುನಾಡು ರೈತರಿಗೆ 15 ದಿನಗಳವರೆಗೆ ನೀರನ್ನು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿರುವುದು ಸರಿಯಲ್ಲ. ಈ ಸೂಚನೆಯಂತೆ ರಾಜ್ಯ ಸರ್ಕಾರ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು. ನಮ್ಮ ರಾಜ್ಯದ ಕೆರೆ-ಕಟ್ಟೆಗಳಿಗೆ ಮೊದಲು ನೀರು ತುಂಬಿಸಬೇಕು ಎಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಕರವೇ (ಶಿವರಾಮೇಗೌಡ್ರು ಬಣ) ತಾಲೂಕು ಅಧ್ಯಕ್ಷ ಕುಮಾರ್ ಉಗನಿಯ, ಸಹ ಕಾರ್ಯದರ್ಶಿ ಮಹದೇವಪ್ಪ, ಉಪಾಧ್ಯಕ್ಷ ಪ್ರಭುಸ್ವಾಮಿ, ಗುಂಡೇಗಾಲ ಶಿವಣ್ಣ, ಶೇಷಯ್ಯ, ಸಂಚಾಲಕ ಕುಣಗಳ್ಳಿ ವಿಜಯ್, ಉಗನಿಯ ಫೈರೋಜ್, ಅಂಕಪ್ಪ, ಮಹಿಳಾ ಘಟಕ ಕಾಮಗೆರೆ ಶಿವಮ್ಮ, ಮುಳ್ಳೂರು ಮಹದೇವಮ್ಮ, ಮುಳ್ಳೂರು ಸುವರ್ಣಮ್ಮ, ರೈತ ಮುಖಂಡರಾದ ರಾಮಕೃಷ್ಣ, ಮೋಳೆ ರಾಜಣ್ಣ, ಗುಂಡೇಗಾಲ ದೊಡ್ಡಶೆಟ್ಟಿ, ದೊಡ್ಡ ಬಸವಯ್ಯ, ಉಗನಿಯ ಶಿವು, ಚಿನ್ನಸ್ವಾಮಿ ಮಾಳಿಗೆ, ಹಿತ್ತಲದೊಡ್ಡಿ ನಾಗರಾಜು, ಕಿರಣ್ ಮತ್ತಿತರರಿದ್ದರು.