ಪಟ್ಟಣದ ಬಸವೇಶ್ವರ ನಗರದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರ ಉತ್ಸವಮೂರ್ತಿ ಮೆರವಣಿಗೆ ಮಾಡಲಾಯಿತು.
ಕೊಳ್ಳೇಗಾಲ: ಪಂಚಲೋಹದಿಂದ ನಿರ್ಮಿಸಿದ್ದ ನೂತನ ಶ್ರೀಜಗದ್ಗುರು ರೇಣುಕಾಚಾರ್ಯರ ಉತ್ಸವ ಮೂರ್ತಿಗೆ 48 ದಿನಗಳ ಮಂಡಲ ಪೂಜೆ ಸೋಮವಾರ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಸಂಕಷ್ಟರ ಗಣಪತಿ ದೇವಾಲಯದಲ್ಲಿ ಕಳೆದ ಮಾ.30ರಂದು ಪಂಚಲೋಹದಿಂದ ನಿರ್ಮಿಸಿದ್ದ ಜಗದ್ಗುರು ರೇಣುಕಾಚಾರ್ಯರ ಉತ್ಸವ ಮೂರ್ತಿಯ ಸಂಪ್ರೋಕ್ಷಣೆ ನೆರವೇರಿಸಿ ಪ್ರತಿಷ್ಠಾಪಿಸಲಾಗಿತ್ತು. ಮಾ.31ರಂದು ಪಟ್ಟಣದಲ್ಲಿ ಶ್ರೀರೇಣುಕಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ಪಂಚಲೋಹದ ಪುತ್ಥಳಿಯನ್ನು ಪಟ್ಣಣದ ಪ್ರಮಖ ರಸ್ತೆಯಲ್ಲಿ ನಂದಿಧ್ವಜ ಕಂಬ, ವೀರಗಾಸೆ ಮತ್ತು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಬಳಿಕ ಪುತ್ಥಳಿಯನ್ನು ಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಇರಿಸಿ 48 ದಿನಗಳ ಮಂಡಲ ಪೂಜೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶ್ರೀರೇಣುಕಾಚಾರ್ಯರ ಪಂಚಲೋಹದ ಪುತ್ಥಳಿಗೆ ಅಜ್ಜೀಪುರ ಪಟ್ಟದ ಮಠದ ಶ್ರೀನಂದೀಶ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಭಿಷೇಕ, ಮಹಾ ಮಂಗಳಾರತಿ ನೆರವೇರಿತು. ನಂತರ ಪುತ್ಥಳಿಯನ್ನು ಮಂಟಪದ ಸುತ್ತು ಪ್ರದಕ್ಷಿಣೆ ಮಾಡಿ ಒಳಗೆ ಇರಿಸಲಾಯಿತು. ಅರ್ಚಕ ಶಿವಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು. ಪಟ್ಟಣದ ಶ್ರೀಬಸವೇಶ್ವರ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಸಾಗಿತು. ಕೊನೆಗೆ ಸಂಕಷ್ಟಹರ ಗಣಪತಿ ದೇವಾಲಯ ತಲುಪಿತು. ಬಳಿಕ 8.30 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಮೆರವಣಿಗೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಅಚರಣಾ ಸಮಿತಿ ಅಧ್ಯಕ್ಷ ಮಹೇಶ್ ಶ್ರೀ ನಿಧಿ, ಗೌರವ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಚೇತನ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಬೀ ಮಾರ್ಟ್, ಪ್ರಕಾಶ್ ಹಾಲಿನ ಡೈರಿ, ವೀರೇಶ್, ಮಹದೇವಸ್ವಾಮಿ ಮೋದಿ ಟೀ ಸ್ಟಾಲ್, ಮಂಜುನಾಥ್, ನಂದೀಶ್, ನಗರಸಭೆ ಮಾಜಿ ಸದಸ್ಯ ಜಿ.ಪಿ.ಶಿವಕುಮಾರ್, ಸಂಕಷ್ಟಹರ ಗಣಪತಿ ದೇವಾಲಯ ಟ್ರಸ್ಟ್ ಅಧ್ಯಕ್ಷೆ ಸುಮಾ ಸುಬ್ಬಣ್ಣ, ಖಜಾಂಚಿ ಜಿ.ಎಸ್.ಎಂ ಪ್ರಸಾದ್, ಕಾರ್ಯದರ್ಶಿ ಎಚ್.ಎಲ್.ಮಹೇಶ್, ಕುಣಗಳ್ಳಿ ಶಿವಸ್ವಾಮಿ, ಮಧುವನಹಳ್ಳಿ ಪ್ರಭಾಕರ್, ರಾಗಿ ಪರಮೇಶ್ ಇತರರಿದ್ದರು.