ಚಾಮರಾಜನಗರದ ಸೆಸ್ಕ್ ಕಚೇರಿ ಮುಂಭಾಗ ವಿದ್ಯುತ್ ಇಲಾಖೆ ನೌಕರರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ದ್ವಾರ ಸಭೆಯಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪದಾಧಿಕಾರಿಗಳು ಭಿತ್ತಿಪತ್ರ ಪ್ರದರ್ಶನ ಮಾಡಿ ೋಷಣೆ ಕೂಗಿದರು.
- ಯೂನಿಯನ್ ಉಪಾಧ್ಯಕ್ಷ ಎನ್.ಮಹೇಶ್ ಹೇಳಿಕೆ
- ಪದಾಧಿಕಾರಿಗಳಿಂದ ನಗರದಲ್ಲಿ ದ್ವಾರಸಭೆ
ಚಾಮರಾಜನಗರ: ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ೆಡರೇಷನ್ ಆ್ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ಎಂಪ್ಲಾಯ್ಸಾ ಯೂನಿಯನ್ ಅಂಡ್ ಅಸೋಸಿಯೇಷನ್ ಪದಾಧಿಕಾರಿಗಳು ಶನಿವಾರ ದ್ವಾರಸಭೆಯನ್ನು ನಡೆಸಿದರು.
ನಗರದ ಶ್ರಿಚಾಮುಂಡೇಶ್ವರ ವಿದ್ಯುತ್ ಸರಬರಾಜು ನಿಗಮದ ಕಚೇರಿ ಬಳಿ ಗುಂಪುಗೂಡಿದ ನೌಕರರು ವಿದ್ಯುತ್ ಖಾಸಗೀಕರಣಕ್ಕೆ ಧಿಕ್ಕಾರ, ಕರೆಂಟ್ ದರ ಏರಿಕೆ ಖಚಿತ, ಗೃಹ ಜ್ಯೋತಿ ಯೋಜನೆ ಬಂದ್, ನೇಮಕಾತಿಯಲ್ಲಿ ಮೀಸಲಾತಿ ರದ್ದು, ಗ್ರಾಮಗಳ ಸಂಪೂರ್ಣ ನಿರ್ಲಕ್ಷ್ಯ, ಕೋಟ್ಯಾಂತರ ರೂ. ಸಾರ್ವಜನಿಕರ ಆಸ್ತಿ ಖಾಸಗಿ ಪಾಲು ಎಂಬ ಭಿತ್ತಿ ಪತ್ರ ಪ್ರದರ್ಶನ ಮಾಡಿ ೋಷಣೆ ಕೂಗಿದರು.
ಇದೇ ವೇಳೆ ಯೂನಿಯನ್‌ನ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಖಾಸಗೀಕರಣ ಎಂದು ಹೇಳುತ್ತಲೇ ನಾವೆಲ್ಲ ಅದರ ಹೊಸ್ತಿಲಿನಲ್ಲಿ ಬಂದು ನಿಂತಿದ್ದೇವೆ. ಖಾಸಗಿ ಕಂಪನಿ ನಾವೂ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಅರ್ಜಿ ಸಲ್ಲಿಸಿದೆ. ಇದರ ವಿರುದ್ಧ ಸಂಘ-ಸಂಸ್ಥೆಗಳು ಹೋರಾಟ ಮಾಡುತ್ತಿವೆ. ಖಾಸಗೀಕರಣವೆಂದರೆ ಇಲಾಖೆಯನ್ನೇ ಹಸ್ತಾಂತರ ಮಾಡುದಂತೆ ಅರ್ಥ. ಬಿಎಸ್‌ಎನ್‌ಎಲ್‌ಗೆ ಪರ್ಯಾಯವಾಗಿ ಹುಟ್ಟಿದ ಟೆಲಿಕಾಂ ಕಂಪನಿಗಳಂತೆಯೇ ಈಗ ವಿದ್ಯುತ್ ಖಾಸಗೀಕರಣವಾಗಿ ಹೋಗುತ್ತದೆ ಎಂದರು.
ಪ್ರಸ್ತುತ ಬಿಎಸ್‌ಎನ್‌ಎಲ್‌ನಲ್ಲಿ ನೌಕರರ ಕೊರತೆ ಕಾಡುತ್ತಿದೆ. ಸರ್ಕಾರ ಹುಟ್ಟಹಾಕಿದ ಸಂಸ್ಥೆಯನ್ನು ಸರ್ಕಾರವೇ ಕತ್ತು ಹಿಸುಕಿ ಸಾಯಿಸುವುದೇ ಖಾಸಗೀಕರಣವಾಗಿದೆ. 1902ರಲ್ಲಿ ಶುರುವಾದ ವಿದ್ಯುತ್ ಇಲಾಖೆ ನೂರಾರು ವರ್ಷಗಳಲ್ಲಿ ಸಾವಿರಾರು ಜನ ಜೀವ ತೇದು ವಿದ್ಯುತ್ ಸರಬರಾಜು ಮಾಡಿದ್ದಾರೆ. ಕಾಡಂಚಿನ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ನೀಡುವ ಕೆಲಸವನ್ನು ಕೆಲಸಗಾರರು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದಾರೆ. ಇಂತಹ ಸಂಸ್ಥೆಯನ್ನು ಖಾಸಗಿಯವರ ಪಾಲು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ನಮ್ಮೊಂದಿಗೆ ವಿದ್ಯುತ್ ಸರಬರಾಜು ಮಾಡುವುದಾಗಿ ಖಾಸಗಿ ಕಂಪನಿ ಕೇಳಿಬರಬಹದು. ಇದು ಮುಂದೊಂದಿ ದಿನ ಪರ್ಯಾಯ ವ್ಯವಸ್ಥೆಯಾಗಿ ಬದಲಾಗಲಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಲೈಸೆನ್ಸ್ ಕೊಡಬಾರದು. ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ತುಂಬಾ ತೊಂದರೆಯಾಗಲಿದೆ. ಅನ್ನದಾತರಿಗೆ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಸೌಲಭ್ಯಕ್ಕೆ ಮುಂದಿನ ದಿನಗಳಲ್ಲಿ ಶುಲ್ಕ ಪಾವತಿ ಮಾಡಬೇಕಾಗಿ ಬರಬಹುದು. ಆಗ ಒಬ್ಬ ರೈತ 10ರಿಂದ 15 ಸಾವಿರ ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಒಬ್ಬ ರೈತ ಇಷ್ಟೊಂದು ಶುಲ್ಕ ಪಾವತಿ ಮಾಡಿ ಕೃಷಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ರಾಜ್ಯದ ಎಲ್ಲ ಕಡೆಗಳಲ್ಲಿ ದ್ವಾರಸಭೆಯನ್ನು ನಡೆಸಿದ್ದೇವೆ. ಶಾಸಕರಿಗೆ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಸಾವಿರಾರು ಜನರು ಜೀವ ತ್ಯಜಿಸಿ ಕಟ್ಟಿರುವ ವಿದ್ಯುತ್ ಇಲಾಖೆಯನ್ನು ಬಂಡವಾಳ ಶಾಹಿಗಳಿಗೆ ನೀಡಿದರೆ ಸಾರ್ವಜನಿಕರಿಗೆ ಯಾವ ರೀತಿ ಸೇವೆ ನೀಡುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಇಂಜಿನಿಯರ್‌ಪ್ರದೀಪ್, ಅಧಿಕಾರಿಗಳಾದ ಮಹೇಶ್, ಧೃಪದ್, ಪ್ರಶಾಂತ್, ಸಿದ್ದರಾಜು, ಮಂಜುನಾಥ್, ಒಕ್ಕೂಟದ ಮುಖಂಡರಾಧ ಮುರುಳಿಕೃಷ್ಣ, ಪ್ರಶಾಂತ್, ಸೋಮೇಶ್, ಶರಣ ಬಸಪ್ಪ, ಮಹದೇವಸ್ವಾಮಿ, ಚನ್ನಂಜಕುಮಾರ್, ಮರಿಸ್ವಾಮಿ, ಸತೀಶ್, ಮಂಜುನಾಥ್ ಹಾಗೂ ಇತರರು ಇದ್ದರು.