ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಪೂರ್ವಭಾವಿ ಸಭೆ ನಡೆಯಿ
- ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಧ್ಯಕ್ಷತೆಯಲ್ಲಿ ಸಭೆ
ಚಾಮರಾಜನಗರ: ಶ್ರೀ ಭಗೀರಥ ಜಯಂತಿಯನ್ನು ಏ.23ರಂದು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಿ, ಮತ್ತೊಂದು ದಿನ ಸಮುದಾಯದವರು ಅದ್ದೂರಿಯಾಗಿ ಆಚರಿಸುವ ವೇಳೆ ಜಿಲ್ಲಾಡಳಿತ ಸಹಕರಿಸಲು ನಿರ್ಧರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಗಡಿಮನೆ ಯಜಮಾನರು, ಮುಖಂಡರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಈ ತೀರ್ಮಾನ ಕೈಗೊಳ್ಳಲಾಯಿತು.
ಭಗೀರಥ ಜಯಂತಿ ಕಾರ್ಯಕ್ರಮಗಳಲ್ಲಿ ಭಗೀರಥರು ಹಾಗೂ ಗಡಿಕಟ್ಟೆ ಮಹತ್ವದ ಬಗ್ಗೆ ರಚಿಸಲಾಗಿರುವ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ವಿತರಿಸಬೇಕು. ಈ ಮೂಲಕ ಹೆಚ್ಚು ಜನರಿಗೆ ಭಗೀರಥರ ಬಗ್ಗೆ ತಿಳಿಸಿಕೊಡುವ ಕಾರ್ಯವಾಗಬೇಕಿದೆ ಎಂದು ಗಡಿಮನೆ ಯಜಮಾನರು ಸಭೆಯಲ್ಲಿ ಹೇಳಿದರು.
ಭಗೀರಥ ಪುತ್ಥಳಿ ಕಾಮಗಾರಿ ಸಂಬಂಧ ವಿವರ ಕೇಳಿದ ಮುಖಂಡರಿಗೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಈಗಾಗಲೇ ಭಗೀರಥ, ಮಹರ್ಷಿ ವಾಲ್ಮೀಕಿ ಮತ್ತು ಕನಕದಾಸರ ಪುತ್ಥಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪುತ್ಥಳಿ ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆಗೆ ಕ್ರಮ ವಹಿಸಲಾಗುತ್ತದೆ. ಎಲ್ಲರ ತೀರ್ಮಾನದಂತೆ ಏ.23ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಶ್ರೀ ಭಗೀರಥ ಜಯಂತಿ ಆಚರಣೆಗೆ ಸಿದ್ಧತೆ ಮಾಡಲಾಗುತ್ತದೆ. ಇದಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಡಿವೈಎಸ್‌ಪಿ ಸ್ನೇಹ ರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಗಡಿಮನೆ ಯಜಮಾನ ಜಯಸ್ವಾಮಿ, ಕೃಷ್ಣ, ಜಯಸಿದ್ದು, ಸಿ.ಕೆ.ಮಹದೇವಶೆಟ್ಟಿ, ಮುಖಂಡರಾದ ಮಂಗಲ ಶಿವಕುಮಾರ್, ಸಿ.ಎ.ಮಹದೇವಶೆಟ್ಟಿ, ಸಿ.ಎಸ್.ನಾಗರಾಜ, ಸಾಗಡೆ ಕೃಷ್ಣಶೆಟ್ಟಿ, ನೂರೊಂದು ಶೆಟ್ಟಿ, ಎಂ. ಜಯಕುಮಾರ್, ಕಾವೇರಿ ಶಿವಕುಮಾರ್, ಸಿ.ಎಂ.ನರಸಿಂಹಮೂರ್ತಿ, ಜಿ.ಬಂಗಾರು, ಚಾ.ಗು.ನಾಗರಾಜು, ಬ್ಯಾಡಮೂಡ್ಲು ಬಸವಣ್ಣ, ನಾರಾಯಣ ಮತ್ತಿತರಿದ್ದರು.