ಯಳಂದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಉಪ್ಪಾರ ಸಮುದಾಯದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಸಂಬಂಧ ಪೂರ್ವಭಾವಿ ಸಭೆ ಜರುಗಿತು. ಕೆಸ್ತೂರು ಆನಂದ, ಹೊನ್ನೂರು ಸಿದ್ದಪ್ಪ, ನಂಜುಂಡಸ್ವಾಮಿ ಇತರರು ಇದ್ದರು.
ಯಳಂದೂರು: ಯಳಂದೂರು ತಾಲೂಕು ಹಾಗೂ ಸಂತೆಮರಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿನ ಉಪ್ಪಾರ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಳಿಗೆ ಈ ತಿಂಗಳಲ್ಲಿ ಪ್ರತಿಭಾ ಪುಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಉಪ್ಪಾರ ಸಮಾಜದ ಕಟ್ಟೆ ಗಡಿಮನೆ ಯಜಮಾನರಾದ ಕೆಸ್ತೂರು ಆನಂದ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ತಾಲೂಕು ಉಪ್ಪಾರ ಸೇನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನು ಸಾರುವ, ಉತ್ತೇಜನ ನೀಡುವ ಮೂಲಕ ನಮ್ಮ ಸಮಾಜದ ಮಕ್ಕಳನ್ನು ಶಿಕ್ಷಿತರಾಗಿ ಮಾಡಲು ಪ್ರಯತ್ನ ಮಾಡಬೇಕಿದೆ. ಜತೆಗೆ ಈ ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಸಮಾಜ ಮುಖಂಡರು, ಸರ್ಕಾರಿ ನೌಕರರ ವರ್ಗ ಸೇರಿದಂತೆ ಇತರರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಯಶ್ವಸಿಯಾಗಿ ನಡೆಸಲು, ಎಲ್ಲ ಗ್ರಾಮದವರ ಸಹಕಾರ ಅಗತ್ಯವಾಗಿದೆ. ಆದ್ದರಿಂದ ಎಲ್ಲರೂ ಇದಕ್ಕೆ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕಿನಕಹಳ್ಳಿ ಸಿದ್ದರಾಜು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹೊನ್ನೂರು ಸಿದ್ದಪ್ಪಸ್ವಾಮಿ, ಕಂದಹಳ್ಳಿ ನಂಜುಂಡಸ್ವಾಮಿ, ಗೌಡಹಳ್ಳಿ ಮಹೇಶ್, ರಂಗಸ್ವಾಮಿ, ತಾಲೂಕು ಉಪ್ಪಾರ ಸೇನಾ ಸಮಿತಿಯ ಅಧ್ಯಕ್ಷ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಕೆಸ್ತೂರು ಸಿದ್ದಪ್ಪಸ್ವಾಮಿ, ವಕೀಲ ಶಿವರಾಜ್, ಮಾದೇಶ್, ಆನಂದ್, ಶಿವರಾಜ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದಗಳ ಯಜಮಾನರು, ಮುಖಂಡರು ಹಾಜರಿದ್ದರು.