ಶೆಟ್ಟಿಳ್ಳಿ ಗ್ರಾಪಂ ವತಿಯಿಂದ ಹೊಸಳ್ಳಿಯಲ್ಲಿ ಆಯೋಜಿಸಿದ್ದ ನರೇಗಾ ಗ್ರಾಮಸಭೆ ಜನರಿಲ್ಲದೆ ರದ್ದಾಯಿತು. ನಾರಾಯಣ್, ವೈರಮಾಣಿಕ್ಯಂ ಇದ್ದರು.
- ಜನರು, ಅಧಿಕಾರಿಗಳು ಗೈರಾಗಿದ್ದರಿಂದ ರದ್ದು
ಹನೂರು: ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಗ್ರಾಮಸಭೆ ಜನರಿಲ್ಲದ ಪರಿಣಾಮ ರದ್ದಾಯಿತು.
ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ನರೇಗಾ ಯೋಜನೆಯ ಕಾಮಗಾರಿ, 15ನೇ ಹಣಕಾಸು ಯೋಜನೆ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಕೈಗೊಂಡಿರುವ ಕಾಮಗಾರಿ ಸಂಬಂಧ ಹೊಸಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆ ನರೇಗಾ ತಾಲೂಕು ಸಂಯೋಜಕ ನಾರಾಯಣ್ ಆಗಮಿಸಿದ್ದರು. ಆದರೆ ಇತರ ಇಲಾಖೆ ಯಾವೊಬ್ಬ ಅಧಿಕಾರಿಯಾಗಲಿ, ಜನರಾಗಲಿ ಆಗಮಿಸಿರಲಿಲ್ಲ. ಈ ಕಾರಣದಿಂದ ನಡೆಯಬೇಕಿದ್ದ ಗ್ರಾಮಸಭೆಯನ್ನು ರದ್ದುಮಾಡಿ ಮುಂದೂಡಲಾಯಿತು. ಸಭೆ ನಡೆಯುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಪಿಡಿಒ ವೈರಮಾಣಿಕ್ಯಂ ತಿಳಿಸಿದರು.