ಕೊಳ್ಳೇಗಾಲ ಮಠದ ಬೀದಿಯ ದಾಸೋಹ ಮಠ ದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಅವರ 893ನೇ ಜಯಂತಿ ಮಹೋತ್ಸವ ಸಮಾರಂಭದ ಪ್ರಚಾರ ಪೋಸ್ಟರ್ ಅನ್ನು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗೌರವಧ್ಯಕ್ಷ ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಕೊಳ್ಳೇಗಾಲ ದಾಸೋಹ ಮಠದ ಶ್ರೀ ಶಿವಪ್ಪ ಸ್ವಾಮೀಜಿ ಚಾಲನೆ ನೀಡಿದರು. ಪುಟ್ಟಣ್ಣ, ಮಲ್ಲೇಶಪ್ಪ, ಬಸಪ್ಪನ ದೊಡ್ಡಿ ಬಸವರಾಜು, ನಂದೀಶ್, ಮಹದೇವ ಸ್ವಾಮಿ ಯುಪಿಎಸ್ ಇತರರು ಇದ್ದರು.
ಕೊಳ್ಳೇಗಾಲ: ಪಟ್ಟಣದ ಮಠದ ಬೀದಿಯ ದಾಸೋಹ ಮಠದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ಬುಧವಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರ ಅವರ 893ನೇ ಜಯಂತಿ ಮಹೋತ್ಸವ ಸಮಾರಂಭದ ಪ್ರಚಾರ ಪೋಸ್ಟರ್‌ಗೆ ಚಾಲನೆ ನೀಡಲಾಯಿತು.
ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಗೌರವಧ್ಯಕ್ಷ ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವ್ವಾಮೀಜಿ ಹಾಗೂ ಕೊಳ್ಳೇಗಾಲ ದಾಸೋಹ ಮಠದ ಶ್ರೀ ಶಿವಪ್ಪ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಪ್ರಚಾರ ಸಮಿತಿಯು ಜಯಂತಿಯ ಆಹ್ವಾನ ಪತ್ರಿಕೆ ವಿತರಣೆಗೆ ಚಾಲನೆ ನೀಡಿದರು.
ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ತಿಮ್ಮರಾಜೀಪುರ ಪುಟ್ಟಣ್ಣ ಮಾತನಾಡಿ, ಮೇ 24 ರಂದು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯುತ್ಸವದ ಅಂಗವಾಗಿ ಬೃಹತ್ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲಿ ನಡೆಯಲಿದೆ. ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಪಿಠಾಧಿಪತಿ ಹಾಗೂ ಬಸವ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಮೆರವಣಿಗೆಗೆ ವಿವಿಧ ಮಠಾಧೀಶರು, ಚಾಮರಾಜನನಗರ ಲೋಕಸಭಾ ಸದಸ್ಯರು, ಜಿಲ್ಲೆಯ ಎಲ್ಲ ಶಾಸಕರು, ಹಾಲಿ-ಮಾಜಿ ಚುನಾಯಿತ ಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ಮೂಲಕ ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ವೀರಶೈವ ಮುಖಂಡ ತೋಟೇಶ್, ಅ.ಭಾ.ವೀ.ಲಿಂ ಮಹಾಸಭಾ ಕಾರ್ಯದರ್ಶಿ ಮಹೇಶ್, ಮಾಜಿ ಅಧ್ಯಕ್ಷರಾದ ಬಸಪ್ಪನದೊಡ್ಡಿ ಬಸವರಾಜು, ಮಹದೇವ ಪ್ರಸಾದ್, ಜಿಲ್ಲಾ ನಿರ್ದೇಶಕ ಗುಂಡೆಗಾಲ ಬಸಪ್ಪ, ತಾಲೂಕು ನಿರ್ದೇಶಕ ಮಹದೇವಸ್ವಾಮಿ ಯುಪಿಎಸ್, ಅಚ್ಗಾಲ್ ಮಹದೇವಸ್ವಾಮಿ, ಬೂದಿತಿಟ್ಟು ಶಿವಕುಮಾರ್, ಖಜಾಂಚಿ ಜಿನಕಹಳ್ಳಿ ನಟರಾಜು, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಇಂದ್ರಕುಮಾರ್, ಮಹಾಮನೆ ಟ್ರಸ್ಟ್ ಅಧ್ಯಕ್ಷ ಮಲ್ಲೇಶಪ್ಪ, ಖಜಾಂಚಿ ನಂದೀಶ್, ರಾಜೇಶ್, ಗೌಡ್ರು. ಮನು, ಆರ್.ಬಸವಣ್ಣ, ಕಾಂತರಾಜು ಮತ್ತಿತರರಿದ್ದರು.