ಮಣ್ಣಿತ್ತಿನ ಅಮಾವಾಸ್ಯೆ ಹಿನ್ನಲೆ ಶ್ರೀ ಕ್ಷೇತ್ರ ಕುರುಬನಕಟ್ಟೆಗೆ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕೊಳ್ಳೇಗಾಲ: ಮಣ್ಣಿತ್ತಿನ ಅಮಾವಾಸ್ಯೆ ಹಿನ್ನಲೆ ತಾಲೂಕಿನ ವಿವಿಧ ದೇವಾ ಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದ್ದು ದೇವಾ ಲಯದಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದರು.
ಶ್ರೀ ಕ್ಷೇತ್ರ ಕುರುಬನ ಕಟ್ಟೆಯಲ್ಲಿ ಅಮಾವಸ್ಯೆ ಹಿನ್ನಲೆಯಲ್ಲಿ ಕಂಡಾ ಗಳಿಗೆ ಪೂಜೆ ಸಲ್ಲಿಸಿ ಬಳಿಕ ಹೂ ಹೊಂಬಾಳೆ ಮಾಡಲಾಯಿತು. ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ರು ದೇವಾಲಯಕ್ಕೆ ಭೇಟಿ ನೀಡಿ ಧೂಪ, ಕರ್ಪೂರ ಹಚ್ಚಿದರು. ವಿಶೇಷವಾಗಿ ಅಧಿಕ ಭಕ್ತರು ಅಮಾವಸ್ಯೆ ಪ್ರಯುಕ್ತ ತಡೆ ಹೊಡಿ ಸಿದರು. ನಂತರ ದೇವರ ಗದ್ದುಗೆ ದರ್ಶನ ಪಡೆದರು. ಕೊಳ್ಳೇಗಾಲ ಪಟ್ಟಣದಲ್ಲಿರುವ ಐತಿಹಾಸಿಕ ಹಿನ್ನಲೆಯುಳ್ಳ ಮರಡಿಗುಡ್ಡ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಅರ್ಚಕ ಶ್ರೀನಿವಾಸ್ ಶಾಸ್ತ್ರಿ ನೇತೃತ್ವದಲ್ಲಿ ಮುಂಜಾನೆ ಯಿಂದ ರುದ್ರಾ ಭಿ?ೇಕ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಪೂಜೆ ನಡೆಯಿತು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಹಣ್ಣು, ಕಾಯಿ ಅರ್ಪಿಸಿ ತಮ್ಮ ಇ?್ಟಾರ್ಥವನ್ನು ಈಡೇರಿಸುವಂತೆ ಬೇಡಿಕೊಂಡರು. ಅಲ್ಲದೆ, ದೇವಾಲಯ ಪಕ್ಕದಲ್ಲಿ ಶ್ರೀ ಮಹ ದೇಶ್ವರ ಅನ್ನ ದಾಸೋಹ ಸಮಿತಿಯ ವತಿಯಿಂದ ನೆರೆದಿದ್ದ ಎಲ್ಲಾ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂತೆಯೇ, ಶ್ರೀ ವಿರಾಂಜನೇಯ ಸ್ವಾಮಿ ದೇವಾಲಯ, ಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.