ಡಾ.ಪುಣ್ಯನಾಗರಾಜ್ ಭಾವಚಿತ್ರವಿದೆ 
ಚಾಮರಾಜನಗರ

ನಾರಿಯರಿಗೆ ರಾಜಕೀಯ ಪ್ರಾತಿನಿಧ್ಯ

ಪ್ರಮುಖ ಮುಖ್ಯಾಂಶಗಳು

  • ನಾರಿ ಶಕ್ತಿ ವಂದನ್ ಅಧಿನಿಯಮ ಜಾರಿ
  • ಬಿಜೆಪಿ ನಾಯಕಿ ಡಾ.ಪುಣ್ಯವತಿ ನಾಗರಾಜ್ ಅಭಿಮತ
ಚಾಮರಾಜನಗರ: ನಾರಿ ಶಕ್ತಿ ವಂದನ್ ಅಧಿನಿಯಮ ಜಾರಿಯಿಂದ ಮಹಿಳೆಯರ ರಾಜಕೀಯ ಸಬಲೀಕರಣವಾಗಲಿದೆ ಎಂದು ಬಿಜೆಪಿ ನಾಯಕಿ ಡಾ.ಪುಣ್ಯವತಿ ನಾಗರಾಜ್ ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ನಾರಿ ಶಕ್ತಿ ವಂದನ್ ಕಾಯ್ದೆ ಮೂಲಕ ಶಾಸನ ಸಭೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಗೆ ಅಪೂರ್ವ ಹೆಜ್ಜೆ ಇಟ್ಟಿದೆ. ಇದರಿಂದ ಸೀಯರಿಗೆ ಅನುಕೂಲವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಯ್ದೆಯಿಂದ ಮಹಿಳಾ ಪ್ರಾತಿನಿಧ್ಯ ದೊರಕಿದೆ. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಕೊಂಡಿದ್ದಾರೆ. ಸಾಧನೆ ಮಾಡುತ್ತಿದ್ದಾರೆ. ಕಾಯ್ದೆಯಿಂದ ಮಹಿಳೆಯರು ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಕಡಿಮೆ ಇರುವ ಪ್ರಾತಿನಿಧ್ಯ ಹೆಚ್ಚಾಗಲಿದೆ. ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಿಂದ ತುಂಬಾ ಅನುಕೂಲಗಳಾಗಿವೆ ಎಂದು ವಿವರಿಸಿದರು.
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕಮಲಮ್ಮ ಮಾತನಾಡಿ, ನಾರಿ ಶಕ್ತಿ ವಂದನ್ ಕಾಯ್ದೆ ಬೆಂಬಲಿಸಿ ಏ.21ರಂದು ಚಾಮರಾಜನಗರದಲ್ಲಿ ಮ್ಯಾರಥಾನ್, ಬೈಕ್ ರ‌್ಯಾಲಿ ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಮುಖಂಡರಾದ ಹೊನ್ನೂರು ಮಹದೇವಸ್ವಾಮಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಮತಾ, ಶೈಲ, ಶೇಷಪ್ಪ ಹಾಜರಿದ್ದರು.