ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ಡೆಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ ಅವರು ಸಿಎಂ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಪದಕ ಪಡೆದರು.  
ಚಾಮರಾಜನಗರ

ಮುಖ್ಯಮಂತ್ರಿ ಪದಕ

ಎ. ಆರ್. ರಘುರಾಮ
ಹನೂರು: ಬೆಂಗಳೂರು ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ಡೆಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಪಟ್ಟಣದ ರಾಜಶೇಖರ್ ಪುತ್ರ ರಾಜೇಶ್ ಅವರು 2025-26ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಂದ ಪಡೆದರು.
ಸೈಬರ್ ಕ್ರೈಂ ತನಿಖಾ ವಿಭಾಗದಲ್ಲಿ 8 ವರ್ಷದ ಅನುಭವವನ್ನು ಹೊಂದಿರುವ ಇವರು ಕ್ರಿಪ್ರೋಕರೆನ್ಸಿ ಸೀಜರ್ ಮತ್ತು ಡಿಜಿಟಲ್ ಆಸ್ತಿ ವಶಪಡಿಸಿಕೊಳ್ಳುವ ವಿಷಯದಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಎಸ್‌ಐಟಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇವರ ಸೇವೆಯನ್ನು ಮನಗಂಡು ಮುಖ್ಯಮಂತ್ರಿ ಪದಕ ಲಭಿಸಿದ್ದು, ಪಟ್ಟಣದ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ.