ಕೊಳ್ಳೇಗಾಲದ ಶ್ರೀ ಸಂಕಷ್ಟಹರ ಗಣಪತಿ ದೇವಾಲಯ ಆವರಣದಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆ ಸಮಿತಿಯಿಂದ ಬಸವೇಶ್ವರರ ಜಯಂತ್ಯುತ್ಸವ ಆಚರಿಸಲಾಯಿತು. 
ಚಾಮರಾಜನಗರ

ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಕೊಳ್ಳೇಗಾಲ: ಪಟ್ಟಣದ ಶ್ರೀ ಸಂಕಷ್ಟಹರ ಗಣಪತಿ ದೇವಾಲಯ ಆವರಣದಲ್ಲಿ ಸೋಮವಾರ ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆ ಸಮಿತಿಯಿಂದ ಶ್ರೀ ಬಸವೇಶ್ವರರ ಜಯಂತ್ಯುತ್ಸವ ಆಚರಿಸಲಾಯಿತು.
ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಮುಖಂಡರಾದ ಲೋಕೇಶ್, ಮಂಜು, ಮಹದೇವಣ್ಣ ಹನೂರು, ಶಿವಪ್ರಕಾಶ್, ಜಿ.ಪಿ.ಶಿವಕುಮಾರ್, ನಾಗೇಂದ್ರ, ಮಹದೇವಸ್ವಾಮಿ( ಮೋದಿ ಟೀ ಸ್ಟಾಲ್), ಮಹೇಶ್, ರಾಜಶೇಖರ್, ಲೋಕೇಶ್, ಎಚ್.ಎಸ್.ಎಂ.ಪ್ರಸಾದ್, ಮಲ್ಲೇಶ್ ಮತ್ತಿತರರಿದ್ದರು.