ಪಿ.ಜಿ ಪಾಳ್ಯ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಜನರು ಪರದಾಡಿದರು.
- 20ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಗ್ಯಾಸ್ ಇಲ್ಲ
ಹನೂರು: ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ತಲೆದೂರಿದ್ದು, ಮಂಗಳವಾರ ಜನರು ಸಿಲಿಂಡರ್ ಪಡೆಯಲು ಪರದಾಡಿದರು.
ಗ್ರಾಮದಲ್ಲಿ ಎಚ್‌ಪಿ ಗ್ಯಾಸ್ ಕಂಪನಿಯ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, 2 ದಿನಕ್ಕೊಮ್ಮೆ ಗ್ಯಾಸ್ ಪೂರೈಕೆಯಾಗುತ್ತಿದೆ. ಬುಕ್ ಮಾಡಿದ್ದ ಸುಮಾರು 50 ಹೆಚ್ಚು ಜನರು ಮಂಗಳವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಪಡೆಯಲು ಗ್ರಾಮದಲ್ಲಿ ಕಾದು ಕುಳಿತಿದ್ದರು. ವಾಹನ ಆಗಮಿಸುತ್ತಿದ್ದಂತೆ ಜನರು ಮುಗಿ ಬಿದ್ದರು. ಆದರೆ 20ಕ್ಕೂ ಹೆಚ್ಚು ಜನರಿಗೆ ಗ್ಯಾಸ್ ಸಿಗಲಿಲ್ಲ. ಇದರಿಂದ ಗಂಟೆಗಟ್ಟಲೇ ಕಾದು ಕುಳಿತಿದ್ದ ಜನರು ಆಕ್ಷೇಪ ವ್ಯಕ್ತಪಡಿಸಿ ಮನೆಗೆ ಹಿಂತಿರುಗಿದರು.
ಈ ಸಂಬಂಧ ರೈತ ಸಂಘದ ಮಹದೇವ ಪ್ರಭುಸ್ವಾಮಿ ವಿಜಯವಾಣಿಯೊಂದಿಗೆ ಮಾತನಾಡಿ, ಗ್ಯಾಸ್ ಸಿಲಿಂಡರ್ ಪಡೆದು 5 ತಿಂಗಳಾಗಿದ್ದು, ಇದೀಗ ಬುಕ್ ಮಾಡಲಾಗಿತ್ತು. ಆದರೆ ಗ್ಯಾಸ್ ಸಿಗಲಿಲ್ಲ. ಇದರಿಂದ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಸುವಂತೆ ಒತ್ತಾಯಿಸಿದರು.