ಕೊಳ್ಳೇಗಾಲ ಪಟ್ಟಣದ ಶ್ರೀ ನಾರಾಯಣಸ್ವಾಮಿ ದೇವಾಲಯದಲ್ಲಿ ಶಿಶ್ರದೇವಿ ಭೂದೇವಿ ಸಮೇತ ಶ್ರೀ ನಾರಾಯಣಸ್ವಾಮಿಯ ಮುತ್ತಿನ ಪಲ್ಲಕ್ಕಿಗೆ ಪೂಜೆ ಸಲ್ಲಿಸಲಾಯಿತು. 
ಚಾಮರಾಜನಗರ

ಶ್ರೀ ಲಕ್ಷ್ಮೀ ನಾರಾಯಣಸ್ವಾಮಿಗೆ ಮುತ್ತಿನ ಪಲ್ಲಕ್ಕಿ ಉತ್ಸವ

ಕೊಳ್ಳೇಗಾಲ: ಪಟ್ಟಣದ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಅಂಗವಾಗಿ ಗುರುವಾರ ಲಕ್ಷ್ಮೀ ನಾರಾಯಣಸ್ವಾಮಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಹಂಸವಾಹನ ಉತ್ಸವ ನಡೆಯಿತು.
ದೇವಾಲಯದಲ್ಲಿ ಮುಂಜಾನೆ ನಿತ್ಯ ಪೂಜೆ, ಯಾಗಶಾಲೆಯಲ್ಲಿ ರಥೋತ್ಸವ ಅಂಗವಾಗಿ ಹೋಮ-ಹವನ ನಡೆಯಿತು. ಅಲಂಕರಿಸಿದ ಮುತ್ತಿನ ಪಲಕ್ಕಿಯಲ್ಲಿ ಶ್ರೀದೇವಿ ಭೂದೇವಿ ಸೇರಿದಂತೆ ನಾರಾಯಣಸ್ವಾಮಿ ಉತ್ಸವ ರಾಜ ಬೀದಿಗಳಲ್ಲಿ ಸಾಗಿತು. ಮೆರವಣಿಗೆ ಬಳಿಕ ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ ಬೆಳಗಿ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ, ಸಜ್ಜಿಗೆ, ಹೆಸರುಕಾಳು ಪ್ರಸಾದ ನೀಡಲಾಯಿತು. ಸಂಜೆ ಹಂಸವಾಹನ ಉತ್ಸವ ರಾಜ ಬೀದಿಗಳಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಎಲ್ಲ ಪೂಜಾ ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕ ಶೇಷಾದ್ರಿ ಭಟ್, ಅರ್ಚಕರಾದ ಸುದರ್ಶನ್ ಭಟ್, ಗೋಪಾಲ ಕೃಷ್ಣ, ಅನಂತ ಶೇಷ, ಕೃಷ್ಣ ಜೋಯಿಷರು ನೆರವೇರಿಸಿದರು.