ಮಧುವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತ್ಯುತ್ಸವದಲ್ಲಿ ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿದರು. 
ಚಾಮರಾಜನಗರ

ಮಕ್ಕಳ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಆದ್ಯತೆ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ಹನೂರು ಶಾಸಕ ಎಂ.ಆರ್.ಮಂಜುನಾಥ್ ಅಭಿಮತ
ಕೊಳ್ಳೇಗಾಲ: ಭಗೀರಥ ಮಹರ್ಷಿ ಜಯಂತ್ಯುತ್ಸವ ಅಂಗವಾಗಿ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಬೈಪಾಸ್ ರಸ್ತೆಯ ಶ್ರೀ ರಾಜ ಋಷಿ ಭಗೀರಥ ಮಹರ್ಷಿ ಸರ್ಕಲ್‌ನಿಂದ ಆರಂಭಗೊಂಡ ಉತ್ಸವ ಕಬ್ಬಳ್ಳಿ ಮಾರಮ್ಮನ ಸತ್ತಿಗೆ, ಮಹದೇಶ್ವರ ಸತ್ತಿಗೆ, ರಾಕಸಮ್ಮ ಸತ್ತಿಗೆ ಸಮೇತ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನ ತಲುಪಿತು. ಈ ವೇಳೆ ಗ್ರಾಮದ ಯುವಕರು, ಮುಖಂಡರು ಕುಣಿದು ಕುಪ್ಪಳಿಸಿದರು.
ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಮಕ್ಕಳಿಗೆ ಉನ್ನತ ಸ್ಥಾನ-ಮಾನ ನೀಡುತ್ತದೆ ಎಂದರು.
ಮಾಜಿ ಶಾಸಕ ಆರ್.ನರೇಂದ್ರ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಯುವ ಉದ್ಯಮಿ ನಿಶಾಂತ್, ಬಿಜೆಪಿ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್, ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ರಮೇಶ್ , ಯುವ ಮುಖಂಡ ಲೋಕೇಶ್ ನಂಜುಂಡಸ್ವಾಮಿ, ಚೇತನ್ ದೊರೆರಾಜು, ಗ್ರಾಮದ ಮುಖಂಡ ನಾಗೇಂದ್ರ, ಮಹದೇವಸ್ವಾಮಿ, ರಾಚಪ್ಪ, ಮಣಿ ಇತರರಿದ್ದರು.