ಕೊಳ್ಳೇಗಾಲದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿರುವ ಗಣಪತಿ ದೇವಾಲಯ ಮುಂಭಾಗ ಪಂಚಾಚಾರ್ಯರ ಸಮಾಜ ವತಿಯಿಂದ ರಾಜೇಶ್ ಅವರನ್ನು ಸನ್ಮಾನಿಸಲಾಯಿತು. 
ಚಾಮರಾಜನಗರ

ಪಂಚಾಚಾರ್ಯ ಸಮಾಜದಿಂದ ಸಾಧಕರಿಗೆ ಸನ್ಮಾನ

ಪ್ರಜ್ವಲ್.ಎನ್
ಕೊಳ್ಳೇಗಾಲ: ಪಟ್ಟಣದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿರುವ ಗಣಪತಿ ದೇವಾಲಯ ಮುಂಭಾಗ ಭಾನುವಾರ ತಾಲೂಕಿನ ಪಂಚಾಚಾರ್ಯರ ಸಮಾಜ ವತಿಯಿಂದ ಸಾಧಕರನ್ನು ಸನ್ಮಾನಿಸಲಾಯಿತು.
ಮೂಲತಃ ಹನೂರು ತಾಲೂಕಿನ ನಿವಾಸಿ, 2025ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತ ಬೆಂಗಳೂರಿನ ಕ್ರೈಂ ಬ್ಯಾಂಚ್ ಇನ್‌ಸ್ಪೆಪೆಕ್ಟರ್ ರಾಜೇಶ್ ಮತ್ತು 2025-26 ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ 600 ಕ್ಕೆ 585 ಅಂಕಗಳಿಸಿದ ಅನಿಲ್ ಅವರ ಪುತ್ರಿ ಮನಶ್ರೀ, 585 ಅಂಕ ಗಳಿಸಿದ ಶಿಕ್ಷಕ ಪರಶಿವಮೂರ್ತಿ ಅವರ ಪುತ್ರಿ ನಿಶ್ಚಯಾ ಅವರನ್ನು ಸನ್ಮಾನಿಸಲಾಯಿತು.
ಪಂಚಾಚಾರ್ಯ ಸಮಾಜದ ಮುಖಂಡರಾದ ಪ್ರಕಾಶ್, ನಟರಾಜಪ್ಪ, ರಾಜಶೇಖರ್‌ಮೂರ್ತಿ (ಜೆಂಬಣ್ಣ), ಜಿಎಸ್‌ಆರ್ ಮಹೇಶ್, ಪ್ರಭಾಕರ್, ನಗರಸಭೆ ಮಾಜಿ ಸದಸ್ಯ ಜಿ.ಪಿ.ಶಿವಕುಮಾರ್, ಮೋದಿ ಟೀ ಸ್ಟಾಲ್ ಮಹದೇವಸ್ವಾಮಿ, ವಿಜಯವಾಣಿ ಪ್ರತಿಕಾ ಪ್ರತಿನಿಧಿ ಮಲ್ಲೇಶ್ ಇತರರು ಇದ್ದರು.