ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಹಾಲ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಒ.ವಿ.ದಿವಾಕರ್ ಅವರಿಗೆ ಜೆಮ್ ಆ್ಯಂಡ್ ಜ್ಯುವೆಲ್ಲರಿ ಕೌನ್ಸಿಲ್ ಅಧ್ಯಕ್ಷ ರಾಜೇಶ್ ರೋಕ್ಡೆ, ಆರ್ಟ್ ಆಫ್ ಜ್ಯುವೆಲ್ಲರಿ ವ್ಯವಸ್ಥಾಪಕ ನಿರ್ದೇಶಕ ಸುಮೇಶ್ ವಧೇರಾ ಪ್ರಶಸ್ತಿ ಪ್ರದಾನ ಮಾಡಿದರು.  
ಚಾಮರಾಜನಗರ

ಒ.ವಿ.ದಿವಾಕರ್ ಓಲೇಟಿಗೆ ಅತ್ಯುತ್ತಮ ಚಿನ್ನದ ಆಭರಣಗಳ ಮಾರಾಟಗಾರ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಚಿನ್ನದ ಆಭರಣಗಳ ಮಾರಾಟಗಾರ ಪ್ರಶಸ್ತಿ
ಕೊಳ್ಳೇಗಾಲ: ಜಿಲ್ಲೆಯ ಹೆಸರಾಂತ ವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್‌ನ ವ್ಯವಸ್ಥಾಪಕ ನಿರ್ದೇಶಕ ಒ.ವಿ.ದಿವಾಕರ್ ಓಲೇಟಿ ಅವರಿಗೆ ಭಾರತದ ಅತ್ಯುತ್ತಮ ಚಿನ್ನದ ಆಭರಣಗಳ ಮಾರಾಟಗಾರ ಪ್ರಶಸ್ತಿ ದೊರೆತಿದೆ.
ಮುಂಬೈ ನಲ್ಲಿರುವ ಜಿಯೋ ವಲ್ಡ್ ಕನ್ವೆನ್ಷನ್ ಸೆಂಟರ್ ಹಾಲ್‌ನಲ್ಲಿ ಶನಿವಾರ ಅಖಿಲ ಭಾರತ ಜೆಮ್ ಆ್ಯಂಡ್ ಜ್ಯುವೆಲ್ಲರಿ ದೇಶೀಯ ಕೌನ್ಸಿಲ್ ಬಾಂಬೆ, ಬೆಂಗಳೂರಿನ ಆರ್ಟ್ ಆಫ್ ಜ್ಯುವೆಲ್ಲರಿ ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ರತ್ನ ಮತ್ತು ಆಭರಣ ಪ್ರದರ್ಶನ ಸಮಾರಂಭದಲ್ಲಿ ದಿವಾಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
\
ವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್ ಕೊಳ್ಳೇಗಾಲ ಪ್ರದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ಪರಂಪರೆಯ ಆಭರಣ ತಾಣಗಳಲ್ಲಿ ಒಂದಾಗಿದ್ದು, 1960ರ ದಶಕದ ಆರಂಭದಿಂದಲೂ ಹೆಸರು ಹೊಂದಿದೆ. ಸಂಪ್ರದಾಯ, ಕರಕುಶಲತೆ ಮತ್ತು ಗ್ರಾಹಕರ ನಂಬಿಕೆಯಲ್ಲಿ ಬಲವಾದ ಅಡಿಪಾಯಕ್ಕೆ ಹೆಸರುವಾಸಿಯಾದ ಈ ಬ್ರಾೃಂಡ್ ತಲೆಮಾರುಗಳಿಂದ ಗ್ರಾಹಕರನ್ನು ಹೊಂದಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಒ.ವಿ.ದಿವಾಕರ್ ಓಲೇಟಿ ಅವರು ಕರ್ನಾಟಕ ಸ್ಟೇಟ್ ಜ್ಯೂವೆಲರ್ಸ್ ಫೆಡರೇಷನ್‌ನ ಉಪ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ.