ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ರಾಜ್ಯ ರೈತ ಸಂಘದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು. .ಎಂ.ಮಹೇಶ್‌ಪ್ರಭು, ಸಿ.ಸಿದ್ದರಾಜು, ಯಶವಂತ್‌ಕುಮಾರ್, ಶಿವಪುರ ಮಹದೇವಪ್ಪ, ಭಾಸ್ಕರ್, ಮೂಡ್ನಾಕೂಡು ಮಹೇಶ್, ಮಲ್ಲಪ್ಪ, ಆಲೂರು ಜಯಣ್ಣ ಇತರರು ಇದ್ದರು.
- ರಾಜ್ಯ ರೈತ ಸಂಘದ ಮುಖಂಡರಿಂದ ಧರಣಿ
- ದರ ಇಳಿಸಿ, ಸಬ್ಸಿಡಿ ಹೆಚ್ಚಿಸುವಂತೆ ಒತ್ತಾಯ
ಚಾಮರಾಜನಗರ: ರಸಗೊಬ್ಬರದ ಬೆಲೆ ಏರಿಕೆಯನ್ನು ವಾಪಸ್ ಪಡೆದುಕೊಂಡು ಸಬ್ಸಿಡಿಯನ್ನು ಹೆಚ್ಚಿಸಿ, ರಿಯಾಯಿತಿ ದರದಲ್ಲಿ ರೈತರಿಗೆ ಗೊಬ್ಬರ ಒದಗಿಸಿಕೊಡಬೇಕೆಂದು ಒತ್ತಾಯಿತಿ ರಾಜ್ಯ ರೈತ ಸಂಘದ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ಅಸಮಾಧಾನ ವ್ಯಕ್ತಪಡಿಸಿ ೋಷಣೆ ಕೂಗಿದರು.
ಯುದ್ಧದ ನೆಲದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಅಗತ್ಯ ವಸ್ತುಗಳ ಬೆಲೆ, ಸಾರಿಗೆ ವೆಚ್ಚ ದುಬಾರಿಯಾಗಿದೆ. ರಸಗೊಬ್ಬರದ ಬೆಲೆ ಏರಿಕೆ ಮಾಡಿರುವುದರಿಂದ ರೈತ ಸಮುದಾಯಕ್ಕೆ ಹೊಡೆತ ಬಿದ್ದಿದೆ. ಕೃಷಿ ಉತ್ಪನ್ನಗಳ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ರೈತರಿಗೆ ದೊರೆಯುತ್ತಿರುವ ಬೆಲೆ ಕಡಿಮೆಯಾಗುತ್ತಲೇ ಇದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಡಾ.ಎಂ.ಎಸ್.ಸ್ವಾಮಿನಾಥನ್ ವರಿಯಂತೆ ಕನಿಷ್ಠ ಬೆಂಬಲ ನೀತಿಯನ್ನು ಜಾರಿಗೆ ತರದೆ ಇರುವುದರಿಂದ ರೈತರು ಕೋಟ್ಯಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ರಸಗೊಬ್ಬರ ಖರೀದಿ ಪ್ರಕ್ರಿಯೆಯ ಕಡ್ಡಾಯ ಲಿಂಕ್ ಪದ್ಧತಿಯನ್ನು ಕೈಬಿಟ್ಟು ರೈತರು ಕೇಳಿದ ರಸಗೊಬ್ಬರವನ್ನೇ ನೀಡಬೇಕು. ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆದು ಕಠಿಣ ಕ್ರಮ ಕೈಗೊಳ್ಳಬೇಕು. ಬರದ ಮುನ್ಸೂಚನೆ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮಗಳನ್ನು ಜರೂರಾಗಿ ಮಾಡಬೇಕು. ಕುಡಿಯುವ ನೀರು, ಜಾನುವಾರು ಮತ್ತು ಮೇವು, ಉದ್ಯೋಗ ಖಾತ್ರಿಗೆ ಒತ್ತು ನೀಡಬೇಕು. ಕಾಂಗ್ರೆಸ್ ಪಕ್ಷದ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿರುವಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಮತ್ತು ಸಂರಕ್ಷಣಾ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್‌ಪ್ರಭು, ರಾಜ್ಯ ವಿಭಾಗೀಯ ಕಾರ್ಯದರ್ಶಿ ಸಿ.ಸಿದ್ದರಾಜು, ಯುವ ಘಟಕದ ರಾಜ್ಯ ಸಂಚಾಲಕ ಯಶವಂತ್‌ಕುಮಾರ್, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಮಹೇಶ್, ತಾಲೂಕು ಕಾರ್ಯಾಧ್ಯಕ್ಷ ಮಲ್ಲಪ್ಪ, ಆಲೂರು ಜಯಣ್ಣ, ಸತ್ತೇಗಾಲದ ಮಹದೇವು, ಶಿವಕುಮಾರ್, ಪ್ರವೀಣ್ ಮತ್ತು ಇತರರು ಹಾಜರಿದ್ದರು.