ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಂಸ್ಟೇನಲ್ಲಿ ಸಿಕ್ಕಿದ ವನ್ಯಜೀವಿಗಳ ಅವಶೇಷಗಳನ್ನು ರೈತಮುಖಂಡರು ಪ್ರದರ್ಶಿಸಿದರು. 
ಚಾಮರಾಜನಗರ

ರೈತ ಸಂಘಟನೆಯಿಂದ ಆಕ್ರೋಶ

ಗುಂಡ್ಲುಪೇಟೆ:

ಜಾನುವಾರುಗಳನ್ನು ಹುಡುಕಿಕೊಂಡು ಕಾಡಿನೊಳಗೆ ಹೋದ ರೈತರ ಮೇಲೆ ಗುಂಡುಹಾರಿಸಿ ಕೊಲ್ಲುವ ಅರಣ್ಯ ಇಲಾಖೆ ಕಾಡಂಚಿನಲ್ಲಿ ಅನಧಿಕೃತ ರೆಸಾರ್ಟ್ ನಿರ್ಮಿಸಿ ಜಿಂಕೆ ಕೊಂಬು, ತಲೆಬುರುಡೆಗಳು ಹಾಗೂ ನವಿಲುಗರಿಗಳನ್ನು ಇಟ್ಟುಕೊಂಡು ಪ್ರದರ್ಶನ ಮಾಡುತ್ತಿರುವ ಪ್ರಭಾವಿಗಳ ವಿರುದ್ಧ ಜಾಣ ಮೌನ ವಹಿಸಿದ್ದಾರೆ ಎಂದು ರೈತ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಪ್ರಮುಖರಾದ ಶಶಿ ಹಾಗೂ ಮಧು ಅವರು ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದಲ್ಲಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ಕರ್ನಲ್ ಜೇಕಬ್ ಎಂಬುವರು ಅಲ್ಲಿ ಅನಧಿಕೃತವಾಗಿ ಹೋಂ ಸ್ಟೇಗೆ ಭೇಟಿ ನೀಡಿದಾಗ ವನ್ಯಜೀವಿಗಳ ಅವಶೇಷಗಳು ಕಂಡು ಬಂದಿವೆ. ಅಲ್ಲಿ ಜಿಂಕೆಯ ಕೊಂಬು, ತಲೆಬುರುಡೆ ಹಾಗೂ ನವಿಲುಗರಿಗಳನ್ನು ಪ್ರದರ್ಶನಕ್ಕೆ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಇವು ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆಯಾಡಿರಬಹುದಾದ ಸಂಶಯಕ್ಕೆ ಕಾರಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.