ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಎಚ್.ಕೆ.ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಗಣ್ಯರು ಕನ್ನಡ ತಾಯಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶ್ರೀಕಂಠೇಶ್ವರ ಸ್ವಾಮೀಜಿ, ಶ್ರೀ ಜ್ಞಾನ ಪ್ರ ಕಾಶ ಸ್ವಾಮೀಜಿ, ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಎನ್.ಮಹೇಶ್, ಜಿ.ಎನ್. ನಂಜುಂಡಸ್ವಾಮಿ, ಪ್ರೇಮಲತಾ ಕೃಷ್ಣಸ್ವಾಮಿ, ಮಹಾನಂದ್ ಇದ್ದಾರೆ. 
ಚಾಮರಾಜನಗರ

ಕೊಳ್ಳೇಗಾಲದಲ್ಲಿ ನಮ್ಮೂರ ಕನ್ನಡ ಹಬ್ಬ ವಿಜೃಂಭಣೆ

ಪ್ರಮುಖ ಮುಖ್ಯಾಂಶಗಳು

  • ಎಚ್.ಕೆ.ಟ್ರಸ್ಟ್, ವಿವಿಧ ಸಂಘ ಸಂಸ್ಥೆಗಳಿಂದ ಆಯೋಜನೆ
  • ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಕೊಳ್ಳೇಗಾಲ: ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಎಚ್.ಕೆ.ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ವಿಜೃಂಭಣೆಯಿಂದ ನಡೆಯಿತು.
ವೇದಿಕೆ ದಿವ್ಯ ಸ್ಞ್ಛ್ಞಾಜಿಧ್ಯ ವಹಿಸಿದ್ದ ತಿ.ನರಸೀಪುರ ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಚ್. ಕೃಷ್ಣಸ್ವಾಮಿ ಅವರು ನಮಗೆ ಬಹಳ ಪರಿಚಿತರಾಗಿದ್ದರು. ಯಾವ ಕಾಯಕ್ರಮವನ್ನು ನಡೆಸಿದರು ನಮ್ಮನ್ನು ಆಹ್ವಾನಿಸುತ್ತಿದ್ದರು. ನಮ್ಮೊಂದಿಗೆ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ಇಂದು ಅವರ ಸ್ಮರಣಾರ್ಥ ನಮ್ಮೂರ ಕನ್ನಡ ಹಬ್ಬ ಆಚರಿಸುವುದು ಸಂತೋಷ ವಿಚಾರ. ಎಚ್.ಕೃಷ್ಣ ಸ್ವಾಮಿ ಅವರ ಪುತ್ರ ಮಹಾನಂದ ಕೃಷ್ಣಸ್ವಾಮಿ ಹನೂ ರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ ಬೃಹತ್ ಕಾರ್ಯಕ್ರಮ ಆಯೋ ಜಿಸಿದ್ದಾಗ ನಾನು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ ಎಂದು ಸ್ಮರಿಸಿದರು.
ಮುಡಿಗುಂಡ ವಿರಕ್ತ ಮಠದ ಶ್ರೀ ಕಂಠೇಶ್ವರ ಸ್ವಾಮೀಜಿ ಮಾತನಾಡಿ, ಎಚ್ ಕೃಷ್ಣಸ್ವಾಮಿ ಅವರ ಸ್ಮರಣಾರ್ಥ ನಮ್ಮೂರ ಕನ್ನಡ ಹಬ್ಬ ಆಚರಣೆ ಬೃಹತ್ ಮಟ್ಟದಲ್ಲಿ ಮಾಡಲಾಗುತ್ತಿದೆ. ಎಚ್.ಕೃಷ್ಣಸ್ವಾಮಿ ಅವರು ಎಲ್ಲರನ್ನು ಪ್ರೀತಿ, ಬಾಂಧವ್ಯದಿಂದ ಕಾಣುತ್ತಿದ್ದರು. ಅವರ ಹಾದಿಯಲ್ಲಿಯೇ ಅವರ ಪುತ್ರ ಮಹಾನಂದ ಕೃಷ್ಣಸ್ವಾಮಿ ನಡೆಯುತ್ತಿದ್ದಾರೆ ಎಂದರು.
ಮೈಸೂರಿನ ಶಿವಯೋಗಿ ಮಠದ ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ದಿ.ಎಚ್.ಕೃಷ್ಣಸ್ವಾಮಿ ಅವರು ಅಕ್ಷರ, ದಾಸೋಹ, ಜ್ಞಾನ, ಹೋರಾಟ, ಅರಿವು ಕ್ರಾಂತಿಯನ್ನು ನಡೆಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದ್ದಾರೆ. ಕೊಳ್ಳೇಗಾಲಕ್ಕೆ ಎಚ್.ಕೆ ಟ್ರಸ್ಟ್ ಮಾದರಿ ಎಂದರು.
ಎಚ್.ಕೆ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಸನ್ಮಾನಿಗೌರ ವಿಸಲಾಯಿತು.
ಈ ವೇಳೆ ಮಾಜಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಎನ್.ಮಹೇಶ್, ಆರ್.ನರೇಂದ್ರ, ಎಸ್.ಬಾಲರಾಜ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಬೆಂಗಳೂರು ಸಿಸಿಬಿ ಎಸಿಪಿ ಮಹಾನಂದ್ ಕೃಷ್ಣ ಸ್ವಾಮಿ, ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಘ ಅಧ್ಯಕ್ಷ ಆನಂದ ಮೂರ್ತಿ, ದೇವಾಂಗ ಸಮಾಜ ಯಜ ಮಾನ ಅಚ್ಗಾಳ್ ನಾಗರಾಜಯ್ಯ ಇತರರು ಇದ್ದರು.