ಚಾಮರಾಜನಗರದ ಶಂಕರಪುರದ ಶ್ರೀರಾಮಮಂದಿರದಲ್ಲಿ ಹನುಮ ಉತ್ಸವದ ಪ್ರಯುಕ್ತ ಓಕುಳಿ ಕಾರ್ಯಕ್ರಮ ನಡೆಯಿತು. 
ಚಾಮರಾಜನಗರ

ಹನುಮ ಉತ್ಸವದಲ್ಲಿ ಓಕುಳಿ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ರಾಮಮಂದಿರದಲ್ಲಿ ಸಡಗರ
  • ಮಕ್ಕಳಿಂದ ಹಿಡಿದು ಹಿರಿಯವರೆಗೆ ಭಾಗಿ
  • ಅಂಜನೇಯಸ್ವಾಮಿ ದೇವರ ಮೂರ್ತಿ ಮೆರವಣಿಗೆ
ಚಾಮರಾಜನಗರ: ನಗರದ ಶಂಕರಪುರದ ಶ್ರೀರಾಮ ಮಂದಿರದಲ್ಲಿ ಹನುಮ ಉತ್ಸವ ಮತ್ತು ಓಕುಳಿ ಕಾರ್ಯಕ್ರಮ ಭಾನುವಾರ ನಡೆಯಿತು. ಬಡಾವಣೆಯ ಮನೆಗಳಿಗೆ ಆಂಜನೇಯ ಸ್ವಾಮಿಯ ಮೆರವಣಿಗೆ ನಡೆಸಿದ ಬಳಿಕ ಓಕುಳಿ ಉತ್ಸವವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು. ಹಿರಿಯರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಪನ್ನೀರನ್ನು ಸಂತಸದಿಂದ ಎರಚಿಕೊಂಡು ಸಂತೋಷಪಟ್ಟರು. ಓಕುಳಿಯ ವಿಶೇಷ ಪ್ರಾರ್ಥನೆ ನಂತರ ಶಂಕರಪುರದ ಮನೆಗಳ ಮುಂಭಾಗದಲ್ಲಿ ಗಂಗಾ ಪೂಜೆಯನ್ನು ನೆರವೇರಿಸಲಾಯಿತು.