ಮಲೆಮಹದೇಶ್ವರ ಬೆಟ್ಟದ ದಾಸೋಹ ಭವನಕ್ಕೆ ಮೈಸೂರು ಕೆ.ಜಿ ಕೊಪ್ಪಲಿನ ಉದ್ಯಮಿ ಶಿವು ಹಾಗೂ ಸ್ನೇಹಿತರು ಅಡುಗೆ ತಯಾರಿಸುವ 2 ಪಾತ್ರೆಯನ್ನು ನೀಡಿದರು. ಮಲ್ಲಿಕಾರ್ಜುನ, ಕಿಶೋರ್, ಶಿವರಾಜು ಇದ್ದರು.
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದಾಸೋಹ ಭವನಕ್ಕೆ ಶನಿವಾರ ಮೈಸೂರು ಕೆ.ಜಿ ಕೊಪ್ಪಲಿನ ಉದ್ಯಮಿ ಶಿವು ಹಾಗೂ ಸ್ನೇಹಿತರು 75 ಸಾವಿರ ರೂ. ಮೌಲ್ಯದ ಅಡುಗೆ ತಯಾರಿಸುವ 2 ಪಾತ್ರೆಯನ್ನು ನೀಡಿದರು.
ಈ ವೇಳೆ ಉದ್ಯಮಿ ಶಿವು ಮಾತನಾಡಿ, ಮಲೆಮಹದೇಶ್ವರ ಬೆಟ್ಟ ಲಕ್ಷಾಂತರ ಭಕ್ತರು ಭೇಟಿ ನೀಡುವ ಪುಣ್ಯ ಸ್ಥಳ. ಹಾಗಾಗಿ ಭಕ್ತರಿಗೆ ಅನುಕೂಲವಾಗುವಂತೆ ಮಾದಪ್ಪನಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕಳೆದ ವರ್ಷ ಒಂದು ಲಕ್ಷ ರೂ. ವೆಚ್ಚದಲ್ಲಿ ಸಾವಿರ ತಟ್ಟೆಗಳನ್ನು ದಾಸೋಹ ಭವನಕ್ಕೆ ನೀಡಲಾಗಿತ್ತು. ಇದೀಗ ಸ್ನೇಹಿತರಾದ ಕಿಶೋರ್, ಶಿವರಾಜ್ ಅವರ ಸಹಕಾರದೊಂದಿಗೆ 100 ಕೆ.ಜಿ ಪ್ರಸಾದ ತಯಾರಿಸುವ 2 ಪಾತ್ರೆಯನ್ನು ಹರಕೆಯ ರೂಪದಲ್ಲಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನನ್ನ ಕೈಲಾದ ಮಟ್ಟಿಗೆ ದಾಸೋಹ ಭವನಕ್ಕೆ ಅಗತ್ಯವಿರುವ
ಸಾಮಗ್ರಿಗಳನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ದಾಸೋಹ ಭವನದ ಮೇಲ್ವಿಚಾರಕ ಮಲ್ಲಿಕಾರ್ಜುನ, ಉದ್ಯಮಿಗಳಾದ ಕಿಶೋರ್, ಶಿವರಾಜು ಇತರರು ಇದ್ದರು.