ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಿ.ಎಂ.ವೆಂಕಟೇಶ್ ಮಾತನಾಡಿದರು. ಯರಗನಹಳ್ಳಿ ಕಾಂತರಾಜು, ಹಿನ್ನಲೆ ಗಾಯಕ ಮಹೇಂದ್ರ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಮಾಜಿ ಸದಸ್ಯ ದುಂಡು ಮಹದೇವ್ ಇದ್ದರು.
- ಈಶ್ವರಿ ಸೋಷಿಯಲ್ ಟ್ರಸ್ಟ್ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾಹಿತಿ
- ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್ ಉದ್ಘಾಟನೆ
- ಮೂಡ್ನಕೂಡು ಚಿನ್ನಸ್ವಾಮಿ ಅವರಿಂದ ಕೃತಿ ಲೋಕಾರ್ಪಣೆ
ಚಾಮರಾಜನಗರ: ಜನಪದ ಸಿರಿ ಕನ್ನಡ, ಈಶ್ವರಿ ಸೋಷಿಯಲ್ ಟ್ರಸ್ಟ್ ಹಾಗೂ ಸುಮಧುರ ಮ್ಯೂಸಿಕಲ್ ಟ್ರಸ್ಟ್ ಸಹಯೋಗದಲ್ಲಿ ಮಾ.7 ರಂದು ಆರ್.ರವಿಕುಮಾರ್ ಕುಮಾರನಪುರ ನಿಯೋಗ ಕಥಾ ಸಂಕಲನ ಲೋಕಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಈಶ್ವರಿ ಸೋಷಿಯಲ್ ಟ್ರಸ್ಟ್ ಅಧ್ಯಕ್ಷ ಸಿ.ಎಂ.ವೆಂಕಟೇಶ್ ತಿಳಿಸಿದರು.
ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್ ಉದ್ಘಾಟಿಸುವರು. ಜನಪದ ಸಿರಿ ಸಂಪಾದಕ ಜರಗನಹಳ್ಳಿ ಕಾಂತರಾಜು ಅಧ್ಯಕ್ಷತೆ ವಹಿಸುವರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಮೂಡ್ನಕೂಡು ಚಿನ್ನಸ್ವಾಮಿ ಕೃತಿ ಲೋಕಾರ್ಪಣೆಗೊಳಿಸುವರು. ಸಾಹಿತಿ ಬಿ.ಎಸ್.ವಿನಯ್ ಕೃತಿ ಕುರಿತು ಮಾತನಾಡುವರು. ಮಾಜಿ ಶಾಸಕ ಎಸ್.ಬಾಲರಾಜು, ಸಾಹಿತಿ ಸೋಮಶೇಖರ್ ಬಿಸಲವಾಡಿ, ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ಅಧ್ಯಕ್ಷ ಉಮೇಶ್ ಕುದರ್, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಸೋಬಾನೆ ಕಲಾವಿದೆ ಹೊನ್ನಮ್ಮ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೃತಿಕಾರ ಆರ್.ರವಿಕುಮಾರ್ ಮತ್ತು ಕೀರ್ತನ್ ಗ್ರಾಫಿಕ್ಸ್ ಪ್ರಕಾಶಕ ಬಸವರಾಜು ಉಪಸ್ಥಿತರಿರುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ ಡಾ.ಮಳವಳ್ಳಿ ಮಹದೇವಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಡಾ.ಶ್ರೀಕಂಠಮೂರ್ತಿ, ಡಾ.ಕೃಷ್ಣಮೂರ್ತಿ ಚಮರಂ, ತಿರುಮಲಾಚಾರ್, ಗಾನಾಸುಮಾ ಪಟ್ಟಸೋಮನಹಳ್ಳಿ, ಬನಶಂಕರ ಆರಾಧ್ಯ, ಸಿದ್ದರಾಜು ಕೆಬ್ಬೇಪುರ ಹಾಗೂ ಪೂರಿಗಾಲಿ ಮಹದೇವಸ್ವಾಮಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಯರಗನಹಳ್ಳಿ ಕಾಂತರಾಜು, ಹಿನ್ನಲೆ ಗಾಯಕ ಮಹೇಂದ್ರ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಮಾಜಿ ಸದಸ್ಯ ದುಂಡು ಮಹದೇವ್ ಹಾಜರಿದ್ದರು.