ಕೊಳ್ಳೇಗಾಲ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳನ್ನು ಮಾನಸ ಸಂಸ್ಥೆಯ ಆಡಳಿತ ಮಂಡಳಿಯಿಂದ ಅಭಿನಂದಿಸಲಾಯಿತು.
ಕೊಳ್ಳೇಗಾಲ: ಪಟ್ಟಣದ ಶ್ರೀ ಮಹದೇಶ್ವರ ಕಾಲೇಜಿನಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಕೊಳ್ಳೇಗಾಲ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ವಿವಿಧ ಕ್ರೀಡೆಯಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಖೋ ಖೋ ಸ್ಪರ್ಧೆಯಲ್ಲಿ ಬಿ.ಹರ್ಷ ಮತ್ತು ತಂಡ ಪ್ರಥಮ ಸ್ಥಾನ, ಥ್ರೋ ಬಾಲ್ ಸ್ಪರ್ಧೆಯಲ್ಲಿ ಎಸ್.ಎನ್.ರೋಹನ್ ಗೌಡ ಮತ್ತು ತಂಡ ಪ್ರಥಮ ಸ್ಥಾನ, ಬಾಸ್ಕೆಟ್‌ಬಾಲ್‌ನಲ್ಲಿ ಜಸ್ಟಿನ್ ಗಾಡ್ರಿನ್ ಮತ್ತು ತಂಡ ಪ್ರಥಮ ಸ್ಥಾನ, ಚೆಸ್‌ನಲ್ಲಿ ಪಿ.ಚಿನ್ಮಯಿ ಪ್ರಥಮ, ಕರಾಟೆಯಲ್ಲಿ ಅದ್ವೈತ್ ಮತ್ತು ಎಸ್.ಸುಪ್ರಿತ್ ನಾಯಕ್ ಪ್ರಥಮ, ಯೋಗಾಸನದಲ್ಲಿ ಹರ್ಷ ಆಚಾರ್ ಪ್ರಥಮ, ಬಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿ ಎಂ.ಮೋನಿಷಾ ಮತ್ತು ತಂಡ ದ್ವಿತೀಯ, ಶಟಲ್ ಬ್ಯಾಡಿಂ್ಮಟನ್ ಆಕಾಶ್ ಮತ್ತು ತಂಡ ದ್ವಿತೀಯ, ಶಟಲ್ ಬ್ಯಾಡಿಂ್ಮಟನ್‌ನಲ್ಲಿ ಧನ್ಯಶ್ರೀ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಚೆಸ್‌ನಲ್ಲಿ ತ್ರಿಲೋಕ್ 3ನೇ ಸ್ಥಾನ, ಬಾಲಕಿಯರ ಚೆಸ್‌ನಲ್ಲಿ ಶರ್ಮಿಳಾ 4, ಜೀವನ್ 5ನೇ ಸ್ಥಾನ. ಅಥ್ಲೆಟಿಕ್ಸ್ ವಿಭಾಗದ ಜಾವಲಿನ್ ಥ್ರೋನಲ್ಲಿ ಜೀವನ್ ಗೌಡ ಪ್ರಥಮ, ಉದ್ದ ಜಿಗಿತ ಮತ್ತು ತ್ರಿವಿಧ ಜಗಿತದಲ್ಲಿ ಎಸ್.ಸುಭಾಷ್ ಪ್ರಥಮ, ಎತ್ತರ ಜಿಗಿತದಲ್ಲಿ ಪೂವರಸನ್ ಪ್ರಥಮ, 4್ಡ400ಮೀ ರಿಲೇ ಗೋವಿಂದರಾಜು ಮತ್ತು ತಂಡ ಪ್ರಥಮ, 400 ಮೀಟರ್ ಓಟ ಗೋವಿಂದರಾಜು ದ್ವಿತೀಯ, 400 ಮೀಟರ್ ಓಟ ಹರಿಪ್ರಿಯಾ ದ್ವಿತೀಯ, 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ನಡಿಗೆ ಸ್ಪರ್ಧೆಯಲ್ಲಿ ಸಂದೇಶ್ ನಾಯಕ್ ದ್ವಿತೀಯ, 4್ಡ400ಮೀ ರಿಲೇ ಸ್ಪರ್ದೆಯಲ್ಲಿ ತೇಜಶ್ವಿನಿ ಮತ್ತು ತಂಡ ದ್ವಿತೀಯ, ಹ್ಯಾಮರ್ ಥೋ ಸ್ಪರ್ಧೆಯಲ್ಲಿ ಸಂದೇಶ್ ರಾಜ್ ದ್ವಿತೀಯ, 400 ಮೀಟರ್ ಓಟದಲ್ಲಿ ಸಂಜಯ್ ತೃತೀಯ, ಎತ್ತರ ಜಿಗಿತದಲ್ಲಿ ಅರ್ಫಾನ್ ತೃತೀಯ, 4್ಡ400ಮೀ. ರಿಲೇ ಅಮಿತ್ ಗೌಡ ಮತ್ತು ತಂಡ ತೃತೀಯ, ಗುಡ್ಡಗಾಡು ಓಟದ ಸ್ಪರ್ಧೆ ಸಂದೇಶ್ ನಾಯಕ್ 4ನೇ ಸ್ಥಾನ, ಜಸ್ಟಿನ್ ಗಾಡ್ರಿನ್ 6ನೇ ಸ್ಥಾನ ಪಡೆದಿದ್ದಾರೆ.
ಸಾಧನೆ ಮಾಡಿದ ಎಲ್ಲ ಕ್ರೀಡಾಪಟುಗಳು, ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ತಂಡದ ವ್ಯವಸ್ಥಾಪಕರಿಗೆ ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.