ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹನೂರಿನ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ರಾಜೇಂದ್ರನ್, ಮಧುಸೂದನ್, ಶ್ರೀದೇವಿ ಇತರರಿದ್ದರು.
ಹನೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಪಟ್ಟಣದ ಶ್ರೀ ವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇಕಡ 100 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.98ರಷ್ಟು ಫಲಿತಾಂಶ ಪಡೆದಿದೆ.
ಈ 2 ವಿಭಾಗದಿಂದ ಪರೀಕ್ಷೆ ಬರೆದಿದ್ದ 50ರ ಪೈಕಿ 49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 9 ಅತ್ಯುನ್ನತ ಶ್ರೇಣಿ, 38 ಪ್ರಥಮ ಹಾಗೂ ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಪಾಸಾಗುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪಿ. ಹರ್ಷಿತಾ (579), ಎನ್. ಪವಿತ್ರಾ (572), ಎಸ್. ವರ್ಷ (557), ದಿವ್ಯಾ (556), ಎನ್. ಮಾನಸ (598) ಹಾಗೂ ಪವನ ಬಾಯಿ (533) ಅಂಕವನ್ನು ಪಡೆದಿದ್ದರೆ, ವಿಜ್ಞಾನ ವಿಭಾಗದಲ್ಲಿ ಎಚ್. ಗಗನಾ ಸಾರಥಿ (547), ಎಸ್. ಜೀವನ್ (531) ಹಾಗೂ ಎನ್. ನರೇಶ್ (514) ಅಂಕವನ್ನು ಪಡೆಯುವುದರ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಅಗತ್ಯ ಮಾರ್ಗದರ್ಶನ ನೀಡಿದ ಉಪನ್ಯಾಸಕರನ್ನು ಸಂಸ್ಥೆ ಅಧ್ಯಕ್ಷೆ ಉಮಾ ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು, ಸಂಚಾಲಕ ರಾಜೇಂದ್ರನ್, ಖಜಾಂಚಿ ಶ್ರೀದೇವಿ ಸುರೇಶ್‌ನಾಯ್ಡು, ಪ್ರಾಂಶುಪಾಲ ಮಧುಸೂದನ್ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.