ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ವಾನರ ದಿನಾಚರಣೆಯನ್ನು ಆಚರಿಸಲಾಯಿತು. ಆರ್.ಕೆ.ಮಧು, ನಂಜುಂಡಸ್ವಾಮಿ ಇದ್ದರು. 
ಚಾಮರಾಜನಗರ

ವಿನಾಶದಂಚಿನಲ್ಲಿ ನೀಲಗಿರಿ ಲಂಗೂರ್, ಸಿಂಗಲೀಕ

ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಳವಳ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ವಿಶ್ವ ವಾನರ ದಿನಾಚರಣೆಯನ್ನು ಆಚರಿಸಲಾಯಿತು.
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಮತ್ತು ಕೋತಿಗಳು ಒಂದೇ ಆದ ಪ್ರೈಮೇಟ್ ವರ್ಗಕ್ಕೆ ಸೇರಿವೆ. ಚಿಂಪಾಜಿಗಳು ಅತಿ ಬುದ್ಧಿ ಹೊಂದಿದ್ದು ಮಾನವನ ನಂತರ ಸ್ಥಾನ ಪಡೆದಿವೆ. ಭಾರತದಲ್ಲಿ ಅದರ ಏಕೈಕ ಪ್ರಬೇಧವಾದ ಹೂಲಾಕ್ ಗಿಬ್ಬನ್ ಅಸ್ಸಾಂನಲ್ಲಿ ನೆಲೆಸಿದ್ದು ವಿನಾಶದಂಚಿನಲ್ಲಿವೆ. ಅಪರೂಪದ ವಾನರ ಪ್ರಬೇಧಗಳು ಈಶಾನ್ಯ ಭಾರತದಲ್ಲಿದ್ದು ಅವುಗಳಲ್ಲಿ ಅಸ್ಸಾಂ ಮಕಾಕ್, ಅರುಣಾಚಲ ಮಕಾಕ್, ಗೋಲ್ಡನ್ ಲಂಗೂರ, ಹಂಪ್ ನೋಸ್ಡ್, ಪಿಗ್ ಟೇಲ್‌ನಲ್ಲಿ ನೆಲೆಸಿವೆ ಎಂದರು. ಕರ್ನಾಟಕದಲ್ಲಿ ನೀಲಗಿರಿ ಲಂಗೂರ್ ಹಾಗೂ ಸಿಂಗಲೀಕ ವಿನಾಶದಂಚಿನಲ್ಲಿದ್ದು ಕೇವಲ 3,500 ಇವೆ. ಶಿವಮೊಗ್ಗದ ಸೋಮೇಶ್ವರ ವನ್ಯಜೀವಿಧಾಮ ದೇಶದ ಏಕೈಕ ಸಿಂಗಲೀಕ ವನ್ಯಜೀವಿ ಧಾಮವಾಗಿದೆ ಎಂದು ಮಾಹಿತಿ ನೀಡಿದರು.
ಶಾಲೆಯ ಶಿಕ್ಷಕ ನಂಜುಂಡಸ್ವಾಮಿ ಮಾತನಾಡಿ, ಮಂಗಗಳು ಮನುಷ್ಯನ ಉಳಿವಿಗೆ ತಮ್ಮ ಪ್ರಾಣ ನೀಡುತ್ತಿದ್ದು ಹಲವು ವೈಜ್ಞಾನಿಕ ಪ್ರಯೋಗಕ್ಕೆ ಒಳಪಡುತ್ತಿವೆ. ಪರಿಸರ ನಾಶದಿಂದ ಕೋತಿಗಳು ಸಂಕಷ್ಟ ಎದುರಿಸಿದ್ದು ಪರಿಸರ ಸಮತೋಲನಕ್ಕೆ ಕೋತಿಗಳು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್.ಕೆ.ಮಧು ಅವರು ಸೆರೆ ಹಿಡಿದಿದ್ದ ಕೋತಿಗಳ ಛಾಯಾಚಿತ್ರ ಪ್ರದರ್ಶಿಸಲಾಯಿತು. ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.