ಬಂಡೀಪುರ ಹುಲಿ ಯೋಜನೆಯ ನೂತನ ನಿರ್ದೇಶಕರಾಗಿಎಲ್.ನಂದೀಶ್ ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ನಿರ್ದೇಶಕ ಎಸ್.ಪ್ರಭಾಕರನ್ ಹಾಜರಿದ್ದರು.  
ಚಾಮರಾಜನಗರ

ಎಲ್. ನಂದೀಶ್ ಅಧಿಕಾರ ಸ್ವೀಕಾರ

ಎ. ಆರ್. ರಘುರಾಮ
ಗುಂಡ್ಲುಪೇಟೆ : ಬಂಡೀಪುರ ಹುಲಿ ಯೋಜನೆಯ ನೂತನ ನಿರ್ದೇಶಕರಾಗಿ ನಿಯೋಜನೆಯಾದ ಎಲ್.ನಂದೀಶ್ ಬುಧವಾರ ಅಧಿಕಾರ ಸ್ವೀಕರಿಸಿದರು. ಕಳೆದ ಮೂರು ವರ್ಷಗಳಿಂದ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಹುದ್ದೆಯಲ್ಲಿದ್ದ ಎಸ್.ಪ್ರಭಾಕರನ್ ಅವರನ್ನು ಸರ್ಕಾರ ಮೈಸೂರಿನ ವರ್ಕಿಂಗ್ ಪ್ಲಾೃನ್ ವಿಭಾಗಕ್ಕೆ ವರ್ಗಾಯಿಸಿದೆ. ಬೆಂಗಳೂರಿನ ಕಾಡುಗೋಡಿಯ ಅರಣ್ಯ ತಾಂತ್ರಿಕ ಮತ್ತು ಆಡಳಿತಾತ್ಮಕ ತರಬೇತಿ ಸಂಸ್ಥೆಯಲ್ಲಿ ಡಿಸಿಎಫ್ ಆಗಿದ್ದ ಎಲ್.ನಂದೀಶ್ ಅವರನ್ನು ಹುಲಿ ಯೋಜನೆಗೆ ನಿಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ಬಂಡೀಪುರಕ್ಕೆ ಆಗಮಿಸಿದ ಎಲ್.ನಂದೀಶ್ ಅವರಿಗೆ ಪ್ರಭಾಕರನ್ ಹೂಗುಚ್ಛ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.