ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ನಂಜುಂಡ ಪ್ರಸಾದ್ ಅಭಿನಂದಿಸಿದರು.
- ಉಪಾಧ್ಯಕ್ಷರಾಗಿ ಶಿವಣ್ಣ ಅವಿರೋಧವಾಗಿ ಆಯ್ಕೆ
ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪದಾಧಿಕಾರಿಗಳನ್ನು ಇತ್ತೀಚೆಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ನಾಗೇಶ್, ಉಪಾಧ್ಯಕ್ಷರಾಗಿ ಶಿವಣ್ಣ, ನಿರ್ದೇಶಕರಾಗಿ ಶಂಭುಲಿಂಗಪ್ಪ, ಶಂಕರಶೆಟ್ಟಿ, ಚಿಕ್ಕಮಾದಶೆಟ್ಟಿ, ಶಿವಶಂಕರ, ಮಹದೇವಶೆಟ್ಟಿ, ಜಯರನಾಯ್ಕ ಹಾಗೂ ಮಾದಮ್ಮ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ನಾಗೇಶ್ ಪ್ರಕಟಿಸಿದರು.
ಪದಾಧಿಕಾರಿಗಳನ್ನು ಚಾಮುಲ್ ನಿರ್ದೇಶಕ ಎಮ್.ಎಂ.ನಂಜುಂಡಪ್ರಸಾದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಡಿ.ಉಲ್ಲಾಸ್, ಸಂಘದ ನೌಕರರು, ಸದಸ್ಯರು ಇದ್ದರು.