ಯಳಂದೂರು: ದಾಸ ಶ್ರೇಷ್ಠ ಕನಕದಾಸರು ತಳ ಸಮುದಾಯದ ಜಾಗೃತ ಧ್ವನಿಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗ ಇಂದಿಗೂ ಪ್ರಸ್ತುತವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದಾಸರ ವಾಣಿ ಅನುಸರಣೆ ಇಂದಿನ ಪೀಳಿಗೆಯ ಅನಿವಾರ್ಯತೆಯಾಗಿದೆ ಎಂದರು.
ಕನಕದಾಸರು ನಾಡು ಕಂಡ ಒಬ್ಬ ಶ್ರೇಷ್ಠ ಕವಿ, ದಾರ್ಶನಿಕ, ಸಾಮಾಜಿಕ ಹೋರಾಟಗಾರ. ಜಾತಿ, ಮತ, ಧರ್ಮಗಳ ಮೌಢ್ಯತೆ ನಮ್ಮನ್ನು ಇಂದಿಗೂ ಆಳುತ್ತಿದೆ. ಇದರಿಂದ ಹೊರಬರಬೇಕು. ಈ ನಿಟ್ಟಿನಲ್ಲಿ ಕನಕದಾಸರ ಪದಗಳು, ಅವರ ಜೀವನ ನಮಗೆ ಆದರ್ಶವಾಗಬೇಕು ಎಂದರು.
ಭಕ್ತಿಗೆ ಎಲ್ಲವನ್ನೂ ಓಲೈಸಿಕೊಳ್ಳುವ ಶಕ್ತಿ ಇದೆ ಎಂಬುದರ ಪ್ರತೀಕವಾಗಿ ಕನಕ ದಾಸರು ಎಂದೆಂದಿಗೂ ಪ್ರಸ್ತುತವಾಗಿ ನಿಂತಿದ್ದಾರೆ. ಸಮಾಜದಲ್ಲಿ ತುಡಿತಕ್ಕೊಳಗಾದವರ ಗಟ್ಟಿ ಧ್ವನಿಯಾಗಿ ನಿಂತಿದ್ದಾರೆ. ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮದಲ್ಲಿ ಕನಕ ಭವನಗಳಿಗೆ ಅನುದಾನ ಕೊಡಿಸಿದ್ದೇನೆ ಎಂದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಪಪಂ ಮಾಜಿ ಅಧ್ಯಕ್ಷೆ ಎಸ್. ಲಕ್ಷ್ಮಿಮಲ್ಲು, ಕುರುಬರ ಸಂಘದ ಅಧ್ಯಕ್ಷ ಕೊಂಡೇಗೌಡ, ಮಾದೇಗೌಡ, ಬಿಳಿಗಿರಿ ರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ತಹಸೀಲ್ದಾರ್ ಎಸ್.ಎಲ್. ನಯನಾ,
ಬಿಇಒ ಮಾರಯ್ಯ, ಯದುಗಿರಿ ಇದ್ದರು.