ಮೈಸೂರಿನ ತಾಂಡವಪುರ ಸಮೀಪದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಪುತ್ಥಳಿಗಳ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ವೀಕ್ಷಿಸಿದರು.  
ಚಾಮರಾಜನಗರ

ಮೂವರು ಮಹನೀಯರ ಪುತ್ಥಳಿಗಳ ನಿರ್ಮಾಣ ವೀಕ್ಷಿಸಿದ ಶಾಸಕ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಕಚೇರಿ ಮುಂದೆ ಸ್ಥಾಪನೆಯಾಗಲಿರುವ ಭಗೀರಥ, ವಾಲ್ಮೀಕಿ, ಕನಕದಾಸರ ಮೂರ್ತಿ
  • ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ನಿರ್ಮಾಣ
ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮಹನೀಯರಾದ ಭಗೀರಥ, ವಾಲ್ಮೀಕಿ, ಕನಕದಾಸರ ಮೂರ್ತಿಗಳ ತಯಾರಿಕೆ ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಮೈಸೂರಿನ ತಾಂಡವಪುರದಲ್ಲಿ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಾಣ ಮಾಡುತ್ತಿರುವ ಮೂರ್ತಿಗಳನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಉಪ್ಪಾರ ಸಮುದಾಯ, ನಾಯಕ ಸಮುದಾಯ, ಕುರುಬ ಸಮುದಾಯಗಳು ಬೇಡಿಕೆಯಂತೆ ಮೂವರು ಮಹಾನ್ ಪುರುಷರ ಪುತ್ಥಳಿ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 1.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರಂತೆ ಮೂರು ಪುತ್ಥಳಿಗಳು ನಿರ್ಮಾಣವಾಗುತ್ತಿದೆ ಎಂದರು.
ಮೂವರು ಮಹಾನ್ ಪುರುಷರ ಪುತ್ಥಳಿಗಳು ಸುಂದರವಾಗಿ, ಆಕರ್ಷಣೀಯವಾಗಿ ಮೂಡಿಬರಬೇಕೆಂದು ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ತಿಳಿಸಿದರು. ಶಿಲ್ಪಿ ಯೋಗಿರಾಜ್ ಮಾತನಾಡಿ, ಪುತ್ಥಳಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮೂರ‌್ನಾಲ್ಕು ತಿಂಗಳೊಳಗೆ ಸಂಪೂರ್ಣ ಕಾರ್ಯ ಮುಗಿಯಲಿದೆ ಎಂದರು.