ಮಂಗಲ ಗ್ರಾಮದ ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಕೆ. ಚಿಕ್ಕಸ್ವಾಮಿ, ಮಲ್ಲಿಕಾರ್ಜುನ, ಮಹದೇವ, ರಾಜಮ್ಮ ಇತರರಿದ್ದರು.  
ಚಾಮರಾಜನಗರ

ವಿವಿಧ ಕಾಮಗಾರಿಗೆ ಶಾಸಕ ಭೂಮಿಪೂಜೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಒಂದು ಕೋಟಿ ರೂ.ಅನುದಾನ
ಹನೂರು: ತಾಲೂಕಿನ ಮಂಗಲ ಗ್ರಾಮದ ಹೊಸ ಬಡಾವಣೆಯಲ್ಲಿ 1 ಕೋಟಿ ರೂ., ವೆಚ್ಚದಲ್ಲಿನ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ರಸ್ತೆ ಹಾಗೂ ಚರಂಡಿ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಇದನ್ನು ಮನಗಂಡು ಸಮಾಜ ಕಲ್ಯಾಣ ಇಲಾಖೆಯ 1 ಕೋಟಿ ರೂ., ಅನುದಾನದಲ್ಲಿ ಇದರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನರು ಈವರೆಗೂ ಎದುರಿಸುತ್ತಿದ್ದ ಸಮಸ್ಯೆಯಿಂದ ಮುಕ್ತಿ ಹೊಂದಲಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ಬಡಾವಣೆಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬಳಿಕ ಅಜ್ಜೀಪುರ ಗ್ರಾಮದಲ್ಲಿ 7 ಕೋಟಿ ರೂ., ವೆಚ್ಚದಲ್ಲಿನ ಎಲ್ಲೇಮಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ. ಚಿಕ್ಕಸ್ವಾಮಿ, ಮುಖಂಡರಾದ ಮಲ್ಲಿಕಾರ್ಜುನ, ಮಹದೇವ, ಶೇಖರ್, ಮಂಜೇಶ್, ರಾಜಣ್ಣ, ರಾಕೇಶ್, ಗುರುಸ್ವಾಮಿ, ಚಂದ್ರಮುರಳಿ, ರಾಜೇಂದ್ರ, ರಾಜಮ್ಮ ಹಾಗೂ ಇನ್ನಿತರರಿದ್ದರು.