ಕುರುಬನಕಟ್ಟೆ ಕ್ಷೇತ್ರಕ್ಕೆ ಮೂಲ ಸೌಕರ್ಯ ಒದಗಿಸುವ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು. ವರುಣ ಲಿಂಗರಾಜೇ ಅರಸ್, ಪುಟ್ಟಣ್ಣ, ಬಿ.ತೋಟೇಶ್, ರಾಜು ತಿಮ್ಮರಾಜೀಪುರ, ಚೇತನ್ ದೊರೈರಾಜ್ ಇತರರು ಇದ್ದರು.  
ಚಾಮರಾಜನಗರ

ಕುರುಬನಕಟ್ಟೆ ಕ್ಷೇತ್ರ ಅಭಿವೃದ್ಧಿಗೆ ಶಾಸಕರಿಂದ ಚಾಲನೆ

ಕೊಳ್ಳೇಗಾಲ: ಕುರುಬನಕಟ್ಟೆ ಕ್ಷೇತ್ರಕ್ಕೆ ಮೂಲಸೌಕರ್ಯ ಒದಗಿಸುವ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧೆಡೆ 4.80 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಬಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದಪ್ಪಾಜಿ ದೇವರ ಒಕ್ಕಲಿಗೆ ಸೇರಿದವರಾಗಿದ್ದಾರೆ. ದೇವಾಲಯವನ್ನು ಅಭಿವೃದ್ಧಿಗೊಳಿಸುವಂತೆ ಸ್ಥಳೀಯ ಮುಖಂಡರು ಸಿಎಂ ಸಿದ್ದರಾಮಯ್ಯ ಅವರ ಬಳಿ ಬೇಡಿಕೆ ಇಟ್ಟಿದ್ದರು. ಅಂತೆಯೇ ಇದೀಗ ಶ್ರೀ ಕ್ಷೇತ್ರ ಕುರುಬನಕಟ್ಟೆ ದೇವಸ್ಥಾನದಲ್ಲಿ ಅಂದಾಜು 2.30 ಕೋಟಿ ರೂ.ವೆಚ್ಚದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ನಡೆಸಲು ಚಾಲನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ದೇವಾಲಯದ ಹೆಚ್ಚುವರಿ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಜಕ್ಕಳ್ಳಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, 30 ಲಕ್ಷ ರೂ. ವೆಚ್ಚದಲ್ಲಿ ಕೋಟೆ ಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿ, 90 ಲಕ್ಷ ರೂ. ವೆಚ್ಚದಲ್ಲಿ ತಿಮ್ಮರಾಜೀಪುರ ಗ್ರಾಮದ ಹೊರ ವಲಯದ ರಸ್ತೆ ಅಭಿವೃದ್ಧಿ, ಕೆಂಪನಪಾಳ್ಯ ಗ್ರಾಮದಲ್ಲಿ 90 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ, ಲಕ್ಕರಸನಪಾಳ್ಯದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಬಸವ ಭವನ ಅಭಿವೃದ್ಧಿ ಸೇರಿದಂತೆ ಇತರ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಒಟ್ಟಾರೆ ಕ್ಷೇತ್ರಾದ್ಯಂತ ರಸ್ತೆಗಳು, ಎಲ್ಲ ಸಮುದಾಯದ ಭವನಗಳ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದರು.
ಕುರುಬನಕಟ್ಟೆ ಧರ್ಮಾಧಿಕಾರಿ ವರುಣ ಲಿಂಗರಾಜೇ ಅರಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಸಾಹಿತಿ ಶಂಕನಪುರ ಮಹದೇವ, ನಾಗರೀಕ ಹಿತರಕ್ಷಣಾ ಸಮಿತಿಯ ನಟರಾಜು ಮಾಳಿಗೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ತಿಮ್ಮರಾಜೀಪುರ ಪುಟ್ಟಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು, ಮಾಜಿ ಉಪಾಧ್ಯಕ್ಷ ಕೆಂಪರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಣ್ಣ, ಯುವ ಮುಖಂಡ ಚೇತನ್ ದೊರೈರಾಜ್, ಶಾಂತರಾಜು, ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಅರ್ಚಕ ಮಲ್ಲಣ್ಣ, ಗುತ್ತಿಗೆದಾರ ಮಹೇಶ್, ಶಿವಕುಮಾರ್, ಮಲ್ಲು ಇತರರು ಇದ್ದರು.