ಹಾಲೇರಿ ಕೆರೆಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಮಾದೇಶ್, ಕಾರ್ತಿಕ್, ವಿಜಯಕುಮಾರ್, ತಂಗವೇಲು ಇತರರು ಇದ್ದರು. 
ಚಾಮರಾಜನಗರ

ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಶಾಸಕ

ಎಂ.ರವಿ
ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ ಸಮೀಪದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಹಾಲೇರಿ ಕೆರೆ ಹೂಳೆತ್ತುವ ಕಾಮಗಾರಿಯ ಸ್ಥಳಕ್ಕೆ ಭಾನುವಾರ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಹಾಲೇರಿ ಕೆರೆ ಈ ಭಾಗದಲ್ಲಿ ನೀರು ಸಂಗ್ರಹವಾಗುವ ಪ್ರಮುಖ ನೀರಿನ ಮೂಲ. ಅಂತರ್ಜಲ ಮಟ್ಟ ಸುಧಾರಣೆಯಿಂದಾಗಿ ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೂ ಅನುಕೂಲವಾಗಿದೆ. ಆದರೆ ಹಲವು ವರ್ಷದಿಂದ ಈ ಕೆರೆ ಅಭಿವೃದ್ಧಿ ಕಂಡಿರಲಿಲ್ಲ. ಇದರಿಂದ ಮಳೆಗಾಲದ ವೇಳೆ ನೀರು ಸಂಗ್ರಹವಾಗುತ್ತಿರಲಿಲ್ಲ. ಪರಿಣಾಮ ಬೇಸಿಗೆ ವೇಳೆ ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಜತೆಗೆ ಕೃಷಿಗೆ ಅನನುಕೂಲವಾಗಿತ್ತು. ಇದನ್ನು ಮನಗಂಡು ಹಾಗೂ ಈ ಭಾಗದ ಜನರ ಆಶಯಕ್ಕೆ ಅನುಗುಣವಾಗಿ ಶಾಸಕರ 30 ಲಕ್ಷ ರೂ. ಅನುದಾನದಲ್ಲಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ವಿಳಂಬ ಮಾಡದೇ ಶೀಘ್ರ ಫೂರ್ಣಗೊಳಿಸಬೇಕು. ಮಳೆಗಾಲದ ವೇಳೆ ಕೆರೆಗೆ ಸರಾಗವಾಗಿ ನೀರು ಹರಿದು ಬರಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಇದರಿಂದ ಮುಂದಿನ ದಿನಗಳಲ್ಲಿ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಲೆಮಹದೇಶ್ವರ ವನ್ಯಜೀವಿ ಧಾಮದ ಆರ್‌ಎಫ್‌ಒ ಮಾದೇಶ್, ಕೆಆರ್‌ಐಡಿಎಲ್ ಎಇ ಕಾರ್ತಿಕ್, ಮುಖಂಡರಾದ ವಿಜಯಕುಮಾರ್, ಶ್ರೀನಿವಾಸ್, ಭಾಗ್ಯರಾಜ್, ಮಾದಯ್ಯ, ತಂಗವೇಲು, ಸಂಧ್ಯಾಗೋ, ರಾಜು, ಮೂರ್ತಿ ಹಾಗೂ ಇನ್ನಿತರರು ಇದ್ದರು.