ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಅಧಿವೇಶನದಲ್ಲಿ ಮಾತನಾ ಡುತ್ತಿ ರುವುದು. 
ಚಾಮರಾಜನಗರ

ಚೆಕ್ ಡ್ಯಾಂ ಕಾಮಗಾರಿ ವಿಳಂಬ

ಎ. ಆರ್. ರಘುರಾಮ
ಕೊಳ್ಳೇಗಾಲ: ಕ್ಷೇತ್ರದ ವ್ಯಾಪ್ತಿಯ ಗೌಡಹಳ್ಳಿ ಗ್ರಾಮದ ಬಳಿ ಹರಿಯುವ ದೊಡ್ಡ ಹಳ್ಳದಲ್ಲಿ 2 ಚೆಕ್ ಡ್ಯಾಮ್ ಹಾಗೂ ಹೆಗ್ಗವಾಡಿ ಗ್ರಾಮದ ಬಳಿ ಹರಿಯುವ ಹೆಬ್ಬಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ವಿಶೇಷ ಘಟಕ ಯೋಜನೆಯಡಿ ಅನುಮೋದಿಸಲು ವಿಳಂಬವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣ ಮೂರ್ತಿ ಆರೋಪಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಶಾಸಕರು ಮಾತನಾಡಿ, ತಾಲೂಕಿನ ಗೌಡಹಳ್ಳಿ ಗ್ರಾಮದ ಬಳಿ ಹರಿಯುವ ದೊಡ್ಡ ಹಳ್ಳದಲ್ಲಿ 2 ಚೆಕ್ ಡ್ಯಾಮ್ ಹಾಗೂ ಹೆಗ್ಗವಾಡಿ ಗ್ರಾಮದ ಬಳಿ ಹರಿಯುವ ಹೆಬ್ಬಳ್ಳದಲ್ಲಿ 1 ಚೆಕ್ ಡ್ಯಾಂ ನಿ ರ್ಮಾಣ ಕಾಮಗಾರಿಯನ್ನು ವಿಶೇಷ ಘಟಕ ಯೋಜನೆ ಯಡಿ ಪ್ರಸ್ತಾವನೆ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು.
ಈ ಕಾಮಗಾರಿ ಅನುಮೋದನೆ ವಿಳಂಬವಾದ್ದರಿಂದ ರೈತರಿಗೆ ಬಹಳ ಸಮಸ್ಯೆ ಉಂಟಾಗಿದೆ. ಯಾವ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಗೌಡಹಳ್ಳಿ ಗ್ರಾಮದ ಬಳಿ ಹರಿಯುವ ದೊಡ್ಡ ಹಳ್ಳದಲ್ಲಿ ಚೆಕ್‌ಡ್ಯಾಂ ಹಾಗೂ ಹೆಗ್ಗವಾಡಿ ಗ್ರಾಮದ ಬಳಿ ಹರಿಯುವ ಹೆಬ್ಬಳ್ಳ ದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳನ್ನು ವಿಶೇಷ ಘಟಕ ಯೋಜನೆಯಡಿ ಕೈಗೆತ್ತಿ ಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ವಿವರ ನೀಡಿದರು.