ಯಳಂದೂರು ಪಟ್ಟಣದ ತಹಸೀಲ್ದಾರ್ ಎಸ್.ಎಲ್.ನಯನಾ ಅವರಿಗೆ ಯರಗಂಬಳ್ಳಿ ಗ್ರಾಮಸ್ಥರು ಬುಧವಾರ ಗ್ರಾಮದ ಬಳಿ ನಡೆಯುತ್ತಿರುವ ಗಣಿಗಾರಿಕೆಯು ಕಾನೂನು ರೀತಿ ನಡೆಯುತ್ತಿದೆ. ಇದರ ವಿರುದ್ಧ ನೀಡಿರುವ ದೂರನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.  
ಚಾಮರಾಜನಗರ

ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಯುತ್ತಿದೆ

ಎಂ.ರವಿ

ಯರಗಂಬಳ್ಳಿ ಗ್ರಾಮಸ್ಥರಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಯಳಂದೂರು: ತಾಲೂಕಿನ ಯರಗಂಬಳ್ಳಿಯ ಖಾಸಗಿ ಜಮೀನಿನಲ್ಲಿ ನಡೆಯುತ್ತಿರುವ ಕರಿಕಲ್ಲು ಗಣಿಗಾರಿಕೆ ಕಾನೂನು ರೀತಿಯಲ್ಲಿ ಕ್ರಮ ಬದ್ಧವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ತಹಸೀಲ್ದಾರ್ ಎಸ್.ಎಲ್.ನಯನಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ತಾಲೂಕು ಕಚೇರಿಯಲ್ಲಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ರಂಗಸ್ವಾಮಿ, ಜ.22 ರಂದು ಚಾಮರಾಜನಗರ ಜಿಲ್ಲಾಧಿಕಾರಿಗೆ ನಂಜಶೆಟ್ಟಿ ಎಂಬುವರು ಯರಗಂಬಳ್ಳಿ ಗ್ರಾಮದ ಸರ್ವೇ ನಂ 711/1, 711/2, 711/3 ರ ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ ಎಂದು ಕೆಲವರು ಆರೋಪಿಸಿ ದೂರು ನೀಡಿದ್ದಾರೆ. ಗ್ರಾಮದ ಕೆಲವು ಮುಗ್ಧ ಅಮಾಯಕ ಜನರನ್ನು ಬಳಸಿಕೊಂಡು ಗಣಿ ಉದ್ಯಮಿ ನಂಜಶೆಟ್ಟಿ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಗಣಿಗಾರಿಕೆ ವಿರುದ್ಧ ಇಲ್ಲಸಲ್ಲದ, ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿ ಸುಳ್ಳು ದೂರನ್ನು ಸಲ್ಲಿಸಿರುತ್ತಾರೆ. ಆದ್ದರಿಂದ ಗಣಿಗಾರಿಕೆಯಿಂದ ಯಾವುದೇ ರೀತಿಯ ಅನನುಕೂಲವಾಗುತ್ತಿಲ್ಲ ಆದ್ದರಿಂದ ಈ ದೂರನ್ನು ಪರಿಗಣಿಸಬಾರದೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸೋಮಣ್ಣ, ನಂಜುಂಡನಾಯಕ, ರಾಜೇಶ್, ನಿಂಗರಾಜು, ರುದ್ರ, ಮಾದೇವ, ನಾಗರಾಜು, ವೆಂಕಟರಂಗ, ಸಿದ್ದ ಮಾರಶೆಟ್ಟಿ, ತಗಡೂರು ಶೆಟ್ಟಿ, ಚಂದ್ರಶೇಖರ್, ಬಲ್ಲಶೆಟ್ಟಿ, ಸೇರಿದಂತೆ ಇತರರು ಹಾಜರಿದ್ದರು.