ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯಲಿರುವ ರಾಷ್ಟ್ರಿಯ ಬಾಲರಂಗೋತ್ಸವಕ್ಕೆ ಆಯ್ಕೆಯಾದ ಯಳಂದೂರು ತಾಲೂಕು ಮೆಳ್ಳಹಳ್ಳಿ ಗ್ರಾಮದ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಹೂಗುಚ್ಚ ನೀಡಿ ಬೀಳ್ಕೊಟ್ಟರು. ತಿಮ್ಮರಾಜು, ಗುರುಮೂರ್ತಿ, ಮಧುಕರ್ ಮಳವಳ್ಳಿ, ಬಿ.ಎಸ್. ವಿನಯ್ ಇತರರಿದ್ದರು.
ಯಳಂದೂರು: ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಸರ್ಕಾರಿ ಆದರ್ಶ ಶಾಲೆಯ ಹೆಣ್ಣು ಮಕ್ಕಳು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಡಿ.5 ಮತ್ತು 6 ರಂದು ನಡೆಯಲಿರುವ ರಾಷ್ಟ್ರೀಯ ರಂಗೋತ್ಸವ ಆಯ್ಕೆಯಾಗಿದ್ದು, ಮಂಗಳವಾರ ಕ್ಷೇತ್ರ ಶಾಸಕ ಎ.ಆರ್. ಕೃಷ್ಣಮೂರ್ತಿ ಮಕ್ಕಳಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಕಂಸಾಳೆ ಒಂದು ಗಂಡು ಕಲೆಯಾಗಿದ್ದು, ಅದನ್ನು ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ, ಮಲೆ ಮಹದೇಶ್ವರರ ಗೀತೆಗೆ ಗಾಯನ ಹಾಗೂ ನೃತ್ಯವನ್ನು ಹೇಳಿಕೊಟ್ಟಿರುವ ನಾಟಕ ಶಿಕ್ಷಕ ಮಧುಕರ್ ಮಳವಳ್ಳಿ, ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವೆ ಎಂದು ಅವರು ಹೇಳಿದರು.
ಪ್ರತಿ ರಾಜ್ಯದಿಂದಲೂ ಒಂದೊಂದು ಶಾಲೆ ಆಯ್ಕೆಯಾಗಿದ್ದು, ನಮ್ಮ ರಾಜ್ಯದಿಂದ ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಳ್ಳಹಳ್ಳಿ ಗ್ರಾಮದ ಸರ್ಕಾರಿ ಆದರ್ಶ ಶಾಲೆ ಆಯ್ಕೆಯಾಗಿರುವುದಕ್ಕೆ ಹೆಮ್ಮೆ ಇದೆ. ರಾಷ್ಟ್ರಮಟ್ಟದಲ್ಲೂ ಈ ಮಕ್ಕಳು ಗೆದ್ದು ಶಾಲೆ, ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಬೆಳಗಲಿ ಎಂದು ಹಾರೈಸಿದರು.
ನಮ್ಮ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದೆ. ಸರ್ಕಾರಿ ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ತೆರೆಯಲಾಗುತ್ತಿದೆ. ಮೆಳ್ಳಹಳ್ಳಿ ಗೇಟ್ ಬಳಿಯಲ್ಲೇ ವಸತಿ ಸಮೇತ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ 2 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು. ಪಟ್ಟಣದಲ್ಲಿ 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ಕಟ್ಟಡದ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷ ಉದ್ಘಾಟನೆಗೆ ಅಣಿಗೊಳಿಸಲಾಗುವುದು. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಸಮುದಾಯಗಳ ಅಭಿವೃದ್ಧಿ ಸೇರಿದಂತೆ ಇತರ ಕೆಲಸಗಳಿಗೆ ಇದುವರೆವಿಗೂ 500 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ತಂದಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಇದೆ ಸಂದರ್ಭದಲ್ಲಿ ಮಧ್ಯಪ್ರದೇಶದ ಭೋಪಾಲ್‌ಗೆ ಮಕ್ಕಳನ್ನು ಹೊತ್ತು ತೆರಳಿದ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಬೀಳ್ಕೊಡಲಾಯಿತು. ಆದರ್ಶ ಪಿಯು ಕಾಲೇಜಿನ ಪ್ರಾಂಶುಪಾಲ ತಿಮ್ಮರಾಜು ಮಾತನಾಡಿದರು. ಮುಖ್ಯ ಶಿಕ್ಷಕ ಗುರುಮೂರ್ತಿ, ನಾಟಕ ಶಿಕ್ಷಕ ಮಧುಕರ್ ಮಳವಳ್ಳಿ, ಶಿಕ್ಷಕ ಬಿ.ಎಸ್. ವಿನಯ್, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್, ಮೆಳ್ಳಹಳ್ಳಿ ಶಿವಣ್ಣ, ದುಂಡಯ್ಯ, ಸೋಮಣ್ಣ, ರಾಜಶೇಖರ್, ರೇವಣ್ಣ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.