ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಆಯೋಜಿಸಿದ್ದ ಅಕ್ಕ ಕೆಫೆಯನ್ನು ಸುನಿಲ್ ಬೋಸ್ ಉದ್ಘಾಟಿಸಿದರು. ಗಣೇಶ್ ಪ್ರಸಾದ್, ಮೋನಾರೋತ್, ಶೃತಿ, ಮರಿಸ್ವಾಮಿ ಇದ್ದರು. 
ಚಾಮರಾಜನಗರ

ನೈರ್ಮಲ್ಯ ಕಾಪಾಡಲು ಕ್ರಮ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಸಂಸದ ಸುನೀಲ್ ಬೋಸ್ ಅಭಿಮತ
  • ಮಲತ್ಯಾಜ್ಯ ಸಂರಕ್ಷಣಾ ಘಟಕ, ಅಕ್ಕ ಕೆಫೆ ಉದ್ಘಾಟನೆ
ಗುಂಡ್ಲುಪೇಟೆ: ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ನೈರ್ಮಲ್ಯ ಕಾಪಾಡಲು ಇನ್ನೂ ಅನೇಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಎಂಆರ್‌ಎಲ್‌ಎಂ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಲತ್ಯಾಜ್ಯ ಸಂರಕ್ಷಣಾ ಘಟಕ ಮತ್ತು ಅಕ್ಕ ಕೆಫೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದ ಹಿನ್ನೆಲೆ ಗ್ರಾಮಸ್ಥರು ಶೌಚಗೃಹದ ಬಳಕೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಲತ್ಯಾಜ್ಯವನ್ನು ಫ್ಯೋರಿಪಿಕೇಷನ್ ಮಾಡಿ, ಆರು ತಿಂಗಳ ಕಾಲ ವೈಜ್ಞಾನಿಕವಾಗಿ ಸಂಸ್ಕರಿಸಿ, ಗೊಬ್ಬರ ತಯಾರಿಸಲಾಗುವುದು. ನಂತರ ಇಂತಿಷ್ಟು ಹಣ ನಿಗದಿ ಮಾಡಿ ಸೊಸೈಟಿ ಮೂಲಕ ವಾಣಿಜ್ಯ ಬೆಳೆಗಳಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಮತ್ತು ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿಯಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದೆ. ಇವು ಗ್ರಾಮೀಣ ಭಾಗದ ನೈರ್ಮಲ್ಯದ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸಮಸ್ಯೆಯಾಗಿ ಕಾಡುವ ಚರಂಡಿಗಳ ಸ್ಚಚ್ಛತೆ ಉತ್ತಮ ನಿರ್ವಹಣೆಗೆ ಅಧಿಕಾರಿಗಳು ಕಾಯಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ನಂತರ ಗ್ರಾಮದ ಪೊಲೀಸ್ ಠಾಣೆ ಬಳಿ ಕೆಆರ್‌ಎಡಿಎಲ್ ಸಂಸ್ಥೆ ನಿರ್ಮಿಸಿರುವ ಅಕ್ಕ ಕೆಫೆ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಮಹಿಳೆಯರ ಸ್ವಾವಲಂಬನೆಗೆ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ. ಪಂಚಗ್ಯಾರಂಟಿ ಯೋಜನೆಗಳೂ ಸಹ ಮಹಿಳೆಯರನ್ನು ಸಬಲರನ್ನಾಗಿಸುವಲ್ಲಿ ನೆರವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೂರದೃಷ್ಟಿ ಇಟ್ಟುಕೊಂಡು ಮಾಡುವ ಕಾರ್ಯಗಳಿಗೆ ಮಹಿಳೆಯರ ಸಹಕಾರ ಮತ್ತು ಬೆಂಬಲ ದೊರಕುತ್ತಿರುವುದು ಸ್ವಾಗತಾರ್ಹ. ರುಚಿ ಮತ್ತು ಶುಚಿಯಾದ ಆಹಾರವನ್ನು ಕಡಿಮೆ ದರದಲ್ಲಿ ನೀಡುವ ಅಕ್ಕ ಕೆಫೆ ಉತ್ತಮ ಯೋಜನೆಯಾಗಿದ್ದು, ಇದನ್ನು ತಾಲೂಕು ಮಟ್ಟದಲ್ಲಿ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಮೋನಾರೋತ್, ಉಪಕಾರ್ಯದರ್ಶಿ ಶೃತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ಮಾಜಿ ಸದಸ್ಯ ಕೆ.ಎಸ್.ಮಹೇಶ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ತಾಲೂಕು ಪಂಚಾಯಿತಿ ಇಒ ಷಣ್ಮುಗಂ, ಗ್ರಾಮಪಂಚಾಯಿತಿ ಆಡಳಿತಾಧಿಕಾರಿ ರಮೇಶ್, ಪಿಡಿಒ ಮಹದೇವಸ್ವಾಮಿ, ಮಲೆಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಲಿಯ ಮಾಜಿ ಅಧ್ಯಕ್ಷ ಡಿ.ಎಸ್.ಸಿದ್ದಪ್ಪ, ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಉಮಾಪತಿ, ಮುಖಂಡರಾದ ಕೆ.ಎನ್.ಮಾದಪ್ಪ, ಕೆ.ಎನ್.ಮಾದಪ್ಪ, ಕೆ.ಎಂ.ಪ್ರಭುಸ್ವಾಮಿ, ಇತರರಿದ್ದರು.