ಪಟ್ಟಣದ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಚನ ಗಾಯನ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಎಂ.ಮಂಜುಳಾ, ಎಸ್. ನಾಗರಾಜು ಕೊಂಗರಹಳ್ಳಿ, ಡಾ.ಪರಮೇಶ್ವರ್, ಶಿವಕುಮಾರ ಸ್ವಾಮಿ, ಶಾಂತ ಮೂರ್ತಿ, ಶಿವಸ್ವಾಮಿ ಪ್ರಕಾಶ್, ರಾಜು, ರಾಮಯ್ಯ ಇತರರು ಇದ್ದರು.
ಕೊಳ್ಳೇಗಾಲ:ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಅವರು ಮನುಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 12ನೇ ಶತಮಾನದ ವಚನ ಕ್ರಾಂತಿ ಲೋಕದ ಕಲ್ಯಾಣವನ್ನು ಮಾಡಿತು. ಇಂತಹ ಮಹಾನುಭಾವರ ವಿಚಾರಗಳು ಮಕ್ಕಳಿಗೆ ತಲುಪಬೇಕು. ಇದರಿಂದ ಅವರು ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ತಿಳಿಸಿದರು.
ಪಟ್ಟಣದ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಳ್ಳೇಗಾಲ, ಶಾಲಾ ಶಿಕ್ಷಣ ಇಲಾಖೆ, ಶರಣ ಭಿಕ್ಷದಾರ್ಯ ಲಿಂಗೈಕ ದೇವರಗುಡ್ಡಪ್ಪ ಮಹಾದೇವಮ್ಮ ಕೊಂಗರಹಳ್ಳಿ ದತ್ತಿ ಹಾಗೂ ಲಿಂಗೈಕ್ಯ ಮಂಗಲದ ತೋಟದ ಮನೆ ಮಹದೇವ ದತ್ತಿ ವತಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 19ನೇ ವರ್ಷದ ವಚನ ಗಾಯನ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಶರಣರ ಭಾವಚಿತ್ರ ಕಲಾ ಹಾಗೂ ಶರಣರ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವಿ ರವಿಕುಮಾರ್, ತಹಸೀಲ್ದಾರ್ ಬಸವರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ 82 ಮಕ್ಕಳು ವಚನ ಗಾಯನ ಮಾಡಿದರು. ಶಾಲಾ-ಕಾಲೇಜು ಮಕ್ಕಳು ಚರ್ಚೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಬವವಣ್ಣ, ಅಕ್ಕ ಮಹಾದೇವ, ಮುಕ್ತಾಯಕ್ಕ, ದೇವರ ದಾಸಿಮಯ್ಯ ಇನ್ನಿತರ ಮಹನೀಯರ ವೇಷಭೂಷಣ ತೊಟ್ಟು ಗಮನ ಸೆಳೆದರು.
ತಾಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಗಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ, ಉಪಾಧ್ಯಕ್ಷ ಡಾ.ಪರಮೇಶ್ವರ್, ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಸಹ ಕಾರ್ಯದರ್ಶಿ ಶಾಂತ ಮೂರ್ತಿ, ನಿರ್ದೇಶಕರಾದ ಶಿವಸ್ವಾಮಿ ಪ್ರಕಾಶ್, ದೇವಾಂಗ ಮಹಾಜನ ಸಂಘದ ಅಧ್ಯಕ್ಷ ರಾಜು, ನಿರ್ದೇಶಕ ರಾಮಯ್ಯ, ಬಸವ ಸೇವಾ ಸಮಿತಿ ಅಧ್ಯಕ್ಷ ಇಂದ್ರ ಕುಮಾರ್, ಅಕ್ಕನ ಬಳಗದ ಅಧ್ಯಕ್ಷೆ ಸವಿತಾ ಲೋಕೇಶ್, ಮತ್ತಿತರಿದ್ದರು.