ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ವೈ.ಸಿ.ಕುಮಾರಸ್ವಾಮಿ, ವೀರಶೆಟ್ಟಿ, ಪಿ.ಸಿ.ಶ್ರೀಕಂಠಸ್ವಾಮಿ, ಪ್ರಭುಪ್ರಸಾದ್, ರೂಪಶ್ರೀ, ರವೀಂದ್ರ, ಉಮೇಶ್, ಲಿಂಗರಾಜಮೂರ್ತಿ ಇದ್ದರು.
- ಶಿಕ್ಷಕ ವೈ.ಸಿ.ಕುಮಾರಸ್ವಾಮಿ
- ತಾಲೂಕು ಆಡಳಿತ
- ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ
- ತಾಲೂಕು ಪಂಚಾಯಿತಿ ಆವರಣ
ಯಳಂದೂರು; ಸವಿತಾ ಸಮಾಜ ಪುರಾಣ ಹಾಗೂ ಐತಿಹಾಸಿಕವಾಗಿ ಪ್ರಬಲ ಸಮುದಾಯವಾಗಿತ್ತು ಎಂಬುದಕ್ಕೆ ಹಲವು ಸಾಕ್ಷಿಗಳಿದ್ದು, ಸಮುದಾಯ ಶಿಕ್ಷಿತರಾಗುವ ಮೂಲಕ ಉನ್ನತ ಸ್ಥಾನ ಅಲಂಕರಿಸಬೇಕು ಎಂದು ಶಿಕ್ಷಕ ವೈ.ಸಿ.ಕುಮಾರಸ್ವಾಮಿ ಸಲಹೆ ನೀಡಿದರು.
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಶಿವನ ಬಲ ಕಣ್ಣಿನಿಂದ ಹುಟ್ಟಿದ ಸವಿತಾ ಮಹರ್ಷಿ ದೇವರಿಗೆ ಅಲಂಕಾರ ಮಾಡುವ ವೃತ್ತಿ ಮಾಡುತ್ತಿದ್ದರು. ಗಾಯತ್ರಿ ಮಂತ್ರದ ಕರ್ತೃವೂ ಇವರಾಗಿದ್ದರು ವೇದ ಮಂತ್ರಗಳನ್ನು ಪಠಣ ಮಾಡುವ ಕಲೆಯನ್ನು ಕಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದರೊಂದಿಗೆ ಇವರು ಆಯುರ್ವೇದ ಪದ್ಧತಿಯನ್ನು ಪರಿಚಯಿಸಿದ ಮೂಲ ಪುರುಷ ಎಂದು ಸ್ಮರಿಸಿದರು.
ಮುಖಂಡ ವೀರಶೆಟ್ಟಿ ಮಾತನಾಡಿದರು. ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಪಿ.ಸಿ.ಶ್ರೀಕಂಠಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಉಪ ತಹಸೀಲ್ದಾರ್ ರೂಪಶ್ರೀ, ತಾಪಂ ಇಒ ರವೀಂದ್ರ, ಸರ್ವೇ ಇಲಾಖೆಯ ಉಮೇಶ್, ಪಪಂ ನಾಮ ನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ದೈಹಿಕ ಪರಿವೀಕ್ಷಕ ಶಾಂತರಾಜು, ರೇಚಣ್ಣ, ಸರಸ್ವತಿ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು, ಬಿಸಿಎಂ ಇಲಾಖೆಯ ನಿಲಯ ಪಾಲಕ ಕುಮಾರ್ ಸೇರಿದಂತೆ ಅನೇಕರು ಇದ್ದರು.