ಗಿರಿಜನ ಯುವಕ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮೊದಲ ಬಹುಮಾನ ಪಡೆದ ತಂಡಕ್ಕೆ ಬಂಡೀಪುರ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಟ್ರೋಫಿ ವಿತರಿಸಿದರು. ನವೀನ್‌ಕುಮಾರ್, ಪರಮೇಶ್ವರ್, ಮಲ್ಲೇಶ್ ಇತರರಿದ್ದರು. 
ಚಾಮರಾಜನಗರ

ಗಿರಿಜನ ಯುವಕರು-ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಪಂದ್ಯ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಕ್ಯಾಂಪಸ್ ಬಳಿ ಅರಣ್ಯ ಇಲಾಖೆಯ ವತಿಯಿಂದ ಕಾಡಂಚಿನ ಹಾಡಿಗಳು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಮತ್ತು ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಕುರಿತು ಅರಿವು ಕಾರ್ಯಕ್ರಮ ನಡೆಸಿತು.
ಈ ಅಂಗವಾಗಿ ಹುಲಿ ಯೋಜನೆಯ ಎಲ್ಲ 13 ವಲಯಗಳ ಗಿರಿಜನ ಯುವಕರ ತಂಡಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಏರ್ಪಡಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮೊದಲ ಬಹುಮಾದ ವಿಜೇತ ತಂಡಕ್ಕೆ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಟ್ರೋಫಿ ವಿತರಿಸಿದರು.
ಎಸಿಎಫ್‌ಗಳಾದ ನವೀನ್‌ಕುಮಾರ್, ಪರಮೇಶ್ವರ, ಆರ್‌ಎಫ್‌ಒಗಳಾದ ಮಲ್ಲೇಶ್, ಮಹದೇವ ಇತರರು ಇದ್ದರು.