ಹನೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವನನ್ನು ಹನೂರು ಪೊಲೀಸರು ಬಂಧಿಸಿರುವುದು.
- ಲೊಕ್ಕನಹಳ್ಳಿಗೆ ತೆರಳುವ ತಟ್ಟೆಹಳ್ಳ ಸೇತುವೆ
- ಯಜಮಾನದೊಡ್ಡಿ ಗ್ರಾಮದ ಶಿವಣ್ಣ ಆಲಿಯಾಸ್ ಗೊಣ್ಣೆ
ಹನೂರು: ಪಟ್ಟಣದ ಲೊಕ್ಕನಹಳ್ಳಿಗೆ ತೆರಳುವ ತಟ್ಟೆಹಳ್ಳ ಸೇತುವೆ ಬಳಿ ಶುಕ್ರವಾರ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಹಾವಿನಮೂಲೆಯ ಯಜಮಾನದೊಡ್ಡಿ ಗ್ರಾಮದ ಶಿವಣ್ಣ ಆಲಿಯಾಸ್ ಗೊಣ್ಣೆ (28) ಬಂಧಿತ ಆರೋಪಿ. ಈತ ತಮಿಳುನಾಡಿನಿಂದ ಗಾಂಜಾ ಖರೀದಿಸಿ ಮಾರಾಟ ಮಾಡುವ ಉದ್ಧೇಶದಿಂದ ಪಟ್ಟಣದ ತಟ್ಟೆಹಳ್ಳ ಸಮೀಪ ಆಗಮಿಸಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ರವಿ ಅವರು ಡಿವೈಎಸ್ಪಿ ಧರ್ಮೇಂದ್ರ ಹಾಗೂ ಇನ್ಸ್‌ಪೆಕ್ಟರ್ ಸಿ. ಆನಂದ ಮೂರ್ತಿ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು.
ಈ ವೇಳೆ ಪರಿಶೀಲಿಸಿದಾಗ ಗಾಂಜಾ ಇರುವುದು ದೃಢಪಟ್ಟಿದೆ. 260 ಹೂ, ಗೊಂಡೆ ಮಿಶ್ರಿತ ಹದಗೊಳಿಸಿದ ಒಣ ಗಾಂಜಾವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಹನೂರು ಠಾಣೆಯ ಸಿಬ್ಬಂದಿ ಚಂದ್ರು, ಸುನೀಲ್, ದಶರಥ, ಕೊಳ್ಳೇಗಾಲ ಕಚೇರಿಯ ರವಿ ಹಾಗೂ ಬಿಳಿಗೌಡ ಭಾಗವಹಿಸಿದ್ದರು.
ಹನೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವನನ್ನು ಹನೂರು ಪೊಲೀಸರು ಬಂಧಿಸಿರುವುದು.