ತಾಲೂಕಿನ ದಾಸನಪುರ ಗ್ರಾಮದ ಹೊರ ವಲಯದಲ್ಲಿ ಅಕ್ರಮವಾಗಿ ಗೌಜಲ ಹಕ್ಕಿಗಳ ಮಾರಾಟಕ್ಕೆ ಯತ್ನಿಸ್ತುತಿದ್ದ ಆರೋಪಿಯನ್ನು ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
- ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರ ಕಾರ್ಯಾಚರಣೆ
ಕೊಳ್ಳೇಗಾಲ: ದಾಸನಪುರ ಗ್ರಾಮದ ಹೊರ ವಲಯದಲ್ಲಿ ಅಕ್ರಮವಾಗಿ ಗೌಜಲಹಕ್ಕಿಗಳ ಮಾರಾಟಕ್ಕೆ ಯತ್ನಿಸುತ್ತಿದ್ದವನನ್ನು ಗುರುವಾರ ಪಟ್ಟಣದ ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ.
ತಿ.ನರಸೀಪುರ ತಾಲೂಕು ತಲಕಾಡು ಹೋಬಳಿಯ ಮೇದನಿ ಗ್ರಾಮದ ಮಾದೇಶ (43) ಬಂಧಿತ ಆರೋಪಿ.
ಪೊಲೀಸ್ ಮಹಾನಿರೀಕ್ಷಕ ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಟ್ಟೂರು ಮಾರ್ಗದರ್ಶನದಲ್ಲಿ ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸ್ ಉಪನಿರೀಕ್ಷಕ ಅವಿನಾಶ್ ತಂಡ ತಾಲೂಕಿನ ದಾಸನಪುರ ಗ್ರಾಮದ ಹೊರ ವಲಯದಲ್ಲಿ ಒಬ್ಬ ವ್ಯಕ್ತಿ ರಸ್ತೆ ಬದಿಯಲ್ಲಿ ಗೌಜಲಹಕ್ಕಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದರು.
ಬಂಧಿತ ಆರೋಪಿಯಿಂದ 12 ಗೌಜಲಹಕ್ಕಿ ಹಾಗೂ 3 ಪಂಜರಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯಲ್ಲಿ ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರ ದಳದ ಸಿಬ್ಬಂದಿ ಬಸವರಾಜ್, ಸ್ವಾಮಿ, ಜಮೀಲ್, ಲತಾ, ರಾಮಚಂದ್ರ, ಪ್ರಭಾಕರ್ ಹಾಗೂ ಬಸವರಾಜ್ ಪಾಲ್ಗೊಂಡಿದ್ದರು.