ಹನೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಉಮೇಶ್, ರಮೇಶ್, ರಾಜು, ಸುರೇಶ್, ಲಿಂಗರಾಜು ಇತರರಿದ್ದರು.  
ಚಾಮರಾಜನಗರ

ಮಹಾವೀರರ ತತ್ವಗಳು ಸಮಾಜಕ್ಕೆ ದಾರಿದೀಪ

ಹನೂರು: ವರ್ಧಮಾನ ಮಹಾವೀರ ಅವರ ತತ್ವಗಳು ಉತ್ತಮ ಸಮಾಜಕ್ಕೆ ದಾರಿದೀಪವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಜೈನ ಧರ್ಮದ ಮಹಾವೀರರು ಉಪವಾಸ ಹಾಗೂ ಧ್ಯಾನದಿಂದ ಜ್ಞಾನೋದಯ ಪಡೆದವರು. ಮನುಷ್ಯರ ಅಪರಿಮಿತ ಆಸೆಗಳನ್ನು ಕೊನೆಗೊಳಿಸಲು ದುರಾಸೆ ಮತ್ತು ಲೌಕಿಕ ಆಸ್ತಿಯನ್ನು ತೊಡೆದು ಹಾಕಬೇಕು ಎನ್ನುವುದನ್ನು ಜಗತ್ತಿಗೆ ಸಾರಿದರು. ಜೈನ ಧರ್ಮದ ಪ್ರಚಾರಕ್ಕಾಗಿ ದೇಶ ಪರ್ಯಟನೆ ಮಾಡಿದ್ದರು. ಇವರು ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹ ತತ್ವವನ್ನು ಪ್ರತಿಪಾದಿಸಿದ್ದು, ಉತ್ತಮ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಆದ್ದರಿಂದ ಜಯಂತಿಯನ್ನು ಆಚರಿಸಿದರೆ ಸಾಲದು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ತಾಪಂ ವ್ಯವಸ್ಥಾಪಕ ಸುರೇಶ್, ಸಿಬ್ಬಂದಿ ರಾಜು, ಲಿಂಗರಾಜು, ರಾಜೇಂದ್ರ, ಮಂಜು, ಸುರೇಶ್ ಇದ್ದರು.