ಯಳಂದೂರು ಪಟ್ಟಣದ ಬಳೇಪೇಟೆಯ ಉಪ್ಪಾರ ಬಡಾವಣೆಯಲ್ಲಿ ಭಗೀರಥ ಜಯಂತಿ ಆಚರಿಸಲಾಯಿತು.
ಯಳಂದೂರು: ಪಟ್ಟಣದ ಬಳೇಪೇಟೆಯ ಉಪ್ಪಾರ ಬಡಾವಣೆಯಲ್ಲಿ ಶ್ರೀ ಭಗೀರಥ ನಾಮಫಲಕಕ್ಕೆ ಪೂಜೆ ಸಲ್ಲಿಸುವ ಮೂಲಕ ಭಗೀರಥ ಮಹರ್ಷಿ ಜಯಂತಿಯನ್ನು ಆಚರಿಸಲಾಯಿತು.
ಗ್ರಾಮದ ಮುಖಂಡರಾದ ನಿಂಗರಾಜು ಮಾತನಾಡಿ, ಭಗೀರಥ ಮಹರ್ಷಿ ಅವರ ತಪಸ್ಸಿನ ಶಕ್ತಿಯಿಂದ ಗಂಗಯನ್ನು ಭೂಲೋಕಕ್ಕೆ ತಂದರು. ಅವರ ತ್ಯಾಗ, ಪರಿಶ್ರಮ ಮತ್ತು ಧ್ಯೇಯ ನಿಷ್ಠೆಯನ್ನು ಯುವಸಮೂಹ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ಮುಖಂಡರಾದ ಉಮೇಶ್, ಜವರಶೆಟ್ಟಿ, ಶ್ರೀನಿವಾಸ್, ರಂಗರಾಜು, ನಾಗರಾಜು, ನಂಜಶೆಟ್ಟಿ, ಮಂಜುನಾಥ್, ಬಂಗಾರಸ್ವಾಮಿ, ಶ್ರೀಕಂಠ, ಮಾದೇಶಶೆಟ್ಟಿ, ನಂಜುಂಸ್ವಾಮಿ, ಮಾದೇವಣ್ಣ ಇತರರು ಹಾಜರಿದ್ದರು.