ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತರ ಚಾಮ ರಾಜನಗರ ಕಚೇರಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾ ಇನ್ಸ್ ಪೆಕ್ಟರ್ ಲೋಹಿತ್ ಕುಮಾರ್ ಅವರು ಸಾರ್ವಜನಿಕರ ದೂರು ಸ್ವೀಕಾರ ಮಾಡಿದರು.
ಕೊಳ್ಳೇಗಾಲ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತರ ಚಾಮ ರಾಜನಗರ ಕಚೇರಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾ ಇನ್ಸ್ ಪೆಕ್ಟರ್ ಲೋಹಿತ್ ಕುಮಾರ್ ಅವರು ಸಾರ್ವಜನಿಕರ ದೂರು ಸ್ವೀಕಾರ ಮಾಡಿದರು. ಈ ಸಂದರ್ಭ ವಿವಿಧ ಸಮಸ್ಯೆಗಳ 5 ದೂರು ಅರ್ಜಿ ಸಲ್ಲಿಕೆಯಾದವು.
ಪಟ್ಟಣದ ವಿದ್ಯಾನಗರ ಸಿದ್ದಯ್ಯ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಸೇರಿದ ಸರ್ವೇ ನಂ 602/7 ತಮ್ಮ ನಿವೇಶನದ ಖಾತೆ ಬದಲಾವಣೆ ಮಾಡಿಕೊಡದ ಬಗ್ಗೆ ದೂರು ಸಲ್ಲಿಸಿದರು.
ಇದಕ್ಕೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್ ಪ್ರತಿಕ್ರಿಯಿಸಿ ಕೂಡಲೇ ಬಗೆಹರಿಸುವಂತೆ ಸಂಬಂಧ ಪಟ್ಟ ಇಲಾಖಾ ಅಧಿ ಕಾರಿಗಳಿಗೆ ಸೂಚಿಸಿದರು.
ಪಟ್ಟಣ ನಿವಾಸಿ ಎ.ಎಚ್.ಗೋವಿಂದ ಮಾತನಾಡಿ, ನಗರ ಸಭೆಯಲ್ಲಿ ಇ-ಸ್ವತ್ತು ನವೀಕರಣ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಕನ್ಸರ್‌ವೆನ್ಸಿ ಗಲ್ಲಿಗಳನ್ನು ಅತಿಕ್ರಮ ಗೊಳಿಸಿ ಕೊಂಡಿದ್ದಾರೆ ದೂರು ಸಲ್ಲಿಸಿದರು. ಸಿದ್ದಯ್ಯನಪುರ ನಿವಾಸಿ ಕೆ.ರಾಜು ಮಾತನಾಡಿ, ಪಟ್ಟಣದ ಚಿನ್ನದ ಅಂಗಡಿಗಳಲ್ಲಿ ಯಾವುದೇ ಅನುಮತಿ ಇಲ್ಲದೇ ಚಿನ್ನದ ಚೀಟಿ ವ್ಯವಹಾರ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ದೂರು ನೀಡಿದರು.
ಪಾಳ್ಯ ಗ್ರಾಮದ ಮಹದೇವಸ್ವಾಮಿ, ನಂಜುಂಡಸ್ವಾಮಿ ಹಾಗೂ ಗ್ರಾಮಸ್ಥರು ಸೆಸ್ಕ್ ಅಧಿಕಾರಿಗಳು ಟ್ರಾನ್ಸ್ ಫಾರಂ ಅಳ ವಡಿಸುವುದರಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ದೂರಿದರು. ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸಿ ಕೊಡುವುದಾಗಿ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್ ಭರವಸೆ ನೀಡಿದರು. ಈ ಸಂದರ್ಭ ಲೋಕಾಯುಕ್ತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ಗಳಾದ ಮಹಾಲಿಂಗಸ್ವಾಮಿ, ಶಾಂತರಾಜು, ಪ್ರತಾಪ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.