ಚನ್ನಾಲಿಂಗನಹಳ್ಳಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಜಾಬ್‌ಕಾರ್ಡ್ ಮೇಳ ಅಭಿಯಾನ ಆಯೋಜಿಸಲಾಗಿತ್ತು. ಲಿಂಗರಾಜು, ಅಂಕರಾಜು, ಮಹದೇವ, ಪಾಪಮ್ಮ ಇತರರಿದ್ದರು.
ಹನೂರು: ನೂತನ ವಿಬಿ ಜಿ ರಾಮ್ ಜಿ ಯೋಜನೆಯಡಿ ಆ.15ರಿಂದ ಸೆ.15ರವೆರೆಗೆ ಕೈಗೊಂಡಿರುವ ಜಾಬ್ ಕಾರ್ಡ್ ಮೇಳ ಅಭಿಯಾನವನ್ನು ಕೂಲಿ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳುವಂತೆ ತಾಲೂಕು ಸಂಯೋಜಕ ಲಿಂಗರಾಜು ತಿಳಿಸಿದರು.
ತಾಲೂಕಿನ ಚನ್ನಾಲಿಂಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ವಿಬಿ ಜಿ ರಾಮ್ ಜಿ ಯೋಜನೆಯ ಜಾಬ್ ಕಾರ್ಡ್ ಮೇಳ ಅಭಿಯಾನದಲ್ಲಿ ಮಾತನಾಡಿದರು. ತಾಂತ್ರಿಕ ಸಹಾಯಕ ಅಂಕರಾಜು, ಕಾಯಕ ಬಂಧು ನೌಕರ ಮಹದೇವ, ಮುಖಂಡರಾದ ನಾಗಯ್ಯ, ಪಾಪಮ್ಮ, ನಿಂಗಮ್ಮ ಇತರರು ಇದ್ದರು.