ಕೊಳ್ಳೇಗಾಲದ ಕನಕ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರವೀಂದ್ರ, ಚೆಲುವರಾಜ್, ನಂಜೇಗೌಡ, ವಿ.ಸಿ.ಬಸವಣ್ಣ ಇತರರು ಇದ್ದರು. 
ಚಾಮರಾಜನಗರ

ಕುರುಬ ಸಮುದಾಯದ ಮಕ್ಕಳು ಉನ್ನತ ಹುದ್ದೆ ಪಡೆಯಲಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಲ್ ಇನ್‌ಸ್ಪೆಕ್ಟರ್ ಎನ್.ರವೀಂದ್ರ ಸಲಹೆ
  • ಪ್ರತಿಭಾ ಪುರಸ್ಕಾರ ಸಮಾರಂಭ

ಕೊಳ್ಳೇಗಾಲ:

ಕುರುಬ ಸಮುದಾಯದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉನ್ನತ ಹುದ್ದೆಗಳನ್ನು ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಎನ್.ರವೀಂದ್ರ ಹೇಳಿದರು.

ಪಟ್ಟಣದ ಕನಕ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ತಾಲೂಕು ಕುರುಬರ ಸಂಘ ಹಾಗೂ ಶ್ರೀ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿದ 16 ವಿದ್ಯಾರ್ಥಿಗಳಿಗೆ ಎರಡು ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಕುರುಬರ ಸಂಘದ ಉಪಾಧ್ಯಕ್ಷ ನಂಜುಂಡ ಅವರು ವೈಯಕ್ತಿಕವಾಗಿ ತಲಾ ಒಂದು ಸಾವಿರ ನೀಡಿದರು.
ಸರ್ಕಲ್ ಇನ್‌ಸ್ಪೆಕ್ಟರ್ ರವೀಂದ್ರ, ಸಬ್‌ಇನ್‌ಸ್ಪೆಕ್ಟರ್ ಚೆಲುವರಾಜು ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಎನ್.ನಂಜೇಗೌಡ, ಉಪಾಧ್ಯಕ್ಷ ವಿ.ಸಿ.ಬಸವಣ್ಣ, ಎಂ.ನಂಜುಂಡ, ಪ್ರಧಾನ ಕಾರ್ಯದರ್ಶಿ ಎಂ.ಸೋಮಶೇಖರ್, ಖಜಾಂಚಿ ಎನ್.ವೆಂಕಟೇಗೌಡ, ಕಾನೂನು ಸಲಹೆಗಾರ ಪಿ.ಮಹದೇವು, ಸಂಘಟನಾ ಕಾರ್ಯದರ್ಶಿ ಎಂ.ಶಶಿಕುಮಾರ್, ನಿರ್ದೇಶಕ ಎಸ್.ನಂಜೇಗೌಡ, ಆರ್.ಪರಶಿವ, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎಚ್.ಬ್ರಹ್ಮಲಿಂಗಯ್ಯ, ಉಪಾಧ್ಯಕ್ಷ ಎಂ.ಮಹದೇವ, ಎನ್.ಶಿವಶಂಕರ್, ಕಾರ್ಯದರ್ಶಿ ಆರ್.ಅಶೋಕ್ ಕುಮಾರ್, ಖಜಾಂಚಿ ಬಸವರಾಜು ಇತರರು ಇದ್ದರು.